ಶ್ರೀನಗರ: ಶೋಪಿಯನ್ ಎನ್ಕೌಂಟರ್ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾದೊಂದಿಗೆ ನಂಟು ಹೊಂದಿರುವ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ.
ಬುಧವಾರ ಶೋಪಿಯಾನ್ನ ಕಂಜಿಯುಲಾರ್ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು.
Advertisement
#ShopianEncounterUpdate: 02 #terrorists linked with proscribed #terror outfit LeT killed. Identification being ascertained. Further details shall follow.@JmuKmrPolice https://t.co/OPG2N2ADlu
— Kashmir Zone Police (@KashmirPolice) June 14, 2022
ಈ ಬಗ್ಗೆ ಕಾಶ್ಮೀರ ಝೋನ್ ಪೊಲೀಸ್ ದೃಡೀಕರಿಸಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯೊಂದಿಗೆ ಸಂಬಂಧ ಹೊಂದಿರುವ ಇಬ್ಬರು ಉಗ್ರರು ಹತರಾಗಿದ್ದಾರೆ. ಹತ್ಯೆಯಾದ ಉಗ್ರರಲ್ಲಿ ಒಬ್ಬನನ್ನು ಶೋಪಿಯಾನ್ನ ಜನ್ ಮೊಹಮ್ಮದ್ ಲೋನ್ ಎಂದು ಗುರುತಿಸಲಾಗಿದೆ. ಈತ ಭಯೋತ್ಪಾದಕ ಕೃತ್ಯಗಳ ಜೊತೆಗೆ ಇತ್ತೀಚೆಗೆ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಹತ್ಯೆಯಲ್ಲಿ ಭಾಗಿಯಾಗಿದ್ದನು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?
Advertisement
#ShopianEncounterUpdate: One of the killed #terrorists has been identified as Jan Mohd Lone of #Shopian. Besides other #terror crimes, he was involved in recent killing of Vijay Kumar, Bank manager on 2/6/22 in #Kulgam district: IGP Kashmir@JmuKmrPolice https://t.co/ltyIDWSGQj
— Kashmir Zone Police (@KashmirPolice) June 14, 2022
ಮಂಗಳವಾರದಂದು ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದರು. ಎನ್ಕೌಂಟರ್ನಲ್ಲಿ ಒಬ್ಬ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಇಡಿ ಇಕ್ಕಳದಲ್ಲಿ ಕಾಂಗ್ರೆಸ್ ನಾಯಕ- 3ನೇ ದಿನವೂ ವಿಚಾರಣೆ ಎದುರಿಸಲಿರುವ ರಾಹುಲ್ ಗಾಂಧಿ