ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ಬಸ್‍ವೊಂದು 100 ಮೀ. ಆಳದ ಪ್ರಪಾತಕ್ಕೆ ಬಿದ್ದು 11 ಜನರು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಲಾಗುತ್ತಿದೆ. ಶ್ರೀನಗರದಿಂದ 175 ಕಿ.ಮೀ. ದೂರದಲ್ಲಿ ಈ ಅವಘಡ ಸಂಭವಿಸಿದೆ.
Advertisement
#JammuAndKashmir: At least 11 dead after a bus skidded off the road and fell into a deep gorge in Plera in Mandi tehsil of Poonch district today, multiple injuries reported. The bus was heading towards Poonch from Loran. More details awaited. pic.twitter.com/nJylRzLDPI
— ANI (@ANI) December 8, 2018
Advertisement
ಘಟನೆಯ ವಿವರ:
ಪ್ರಯಾಣಿಕರನ್ನು ಹೊತ್ತ ಬಸ್ ಇಂದು ಲೋರನ್ ನಿಂದ ಪೂಂಜ್‍ಗೆ ಹೊರಟಿತ್ತು. ಕಿರಿದಾದ ರಸ್ತೆಯಲ್ಲಿ ಚಾಲಕ ಸಾಗುತ್ತಿದ್ದಾಗ ತಿರುವು ಬಂದಿದೆ. ಈ ವೇಳೆ ಚಾಲಕ ನಿಯಂತ್ರಣ ತಪ್ಪಿ ಬಸ್ 100 ಮೀ. ಆಳದ ಪ್ರಪಾತಕ್ಕೆ ಬಿದ್ದಿದೆ. ಬಸ್ ಪಲ್ಟಿ ಹೊಡೆಯುತ್ತಾ ಎರಡು ಕಂದಕದ ಮಧ್ಯದಲ್ಲಿ ಹರಿಯುವ ಕಿರಿದಾದ ನದಿಯಲ್ಲಿ ಬಿದ್ದಿದೆ. ಬಸ್ ಸಂಪೂರ್ಣವಾಗಿ ಜಖಂಗೊಂಡಿದೆ.
Advertisement
ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಸ್ ನಲ್ಲಿದ್ದ 11 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv