ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದ ತಾರಕಕ್ಕೆ ಏರಿದ್ದು, ಮಸೀದಿಯ ಒಳಭಾಗದಲ್ಲಿ ಅಕ್ರಮವಾಗಿ ಮದರಸಾದ ಮಾದರಿಯಲ್ಲಿ 100 ರಿಂದ 200 ಮಂದಿಗೆ ಅರೇಬಿಕ್ ಮತ್ತು ಇಸ್ಲಾಮಿಕ್ ಶಿಕ್ಷಣ ನೀಡುತ್ತಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
Advertisement
ಹಿಂದೂ ಸಂಘಟನೆಗಳು ಹಮ್ಮಿಕೊಂಡಿರುವ ಶ್ರೀರಂಗಪಟ್ಟಣ ಚಲೋದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಜಾಮಿಯಾ ಮಸೀದಿಯೋ ಅಥವಾ ಮಂದಿರವೋ ಎಂದು ನಾವು ಕೋರ್ಟ್‍ನಲ್ಲಿ ತೀರ್ಮಾನ ಮಾಡಿಕೊಳ್ಳುತ್ತೇವೆ. ಆದ್ರೆ ಈ ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಮದರಸಾವನ್ನು ನಿಲ್ಲಿಸಿ ಆ ವಿದ್ಯಾರ್ಥಿಗಳನ್ನು ಹೊರ ಹಾಕಬೇಕು ಎಂದು ಹಿಂದೂಪರ ಸಂಘಟನೆಗಳು ಇಂದು ಹಮ್ಮಿಕೊಂಡಿದ್ದ ಶ್ರೀರಂಗಪಟ್ಟಣ ಚಲೋದಲ್ಲಿ ಕಿಡಿಕಾರಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು?
Advertisement
ಜಾಮಿಯಾ ಮಸೀದಿ ಕೇಂದ್ರ ಪುರಾತತ್ವ ಇಲಾಖೆ ಸೇರದ ಸ್ಮಾರಕವಾಗಿದೆ. ಇಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವ ಹಾಗೆ ಇಲ್ಲ. ಈ ಸ್ಮಾರಕ ಪುರಾತತ್ವ ಇಲಾಖೆಗೆ ಸೇರಿದ್ದರೂ ನಿರ್ವಹಣೆಯನ್ನು ವಕ್ಫ್ ಬೋರ್ಡ್‍ಗೆ ನೀಡಲಾಗಿದೆ. ಹೀಗಾಗಿ ವಕ್ಫ್ ಬೋರ್ಡ್ ಮದರಸಾ ಮಾಡಲು ಅವಕಾಶ ಕಲ್ಪಸಿದೆ. ಇಲ್ಲಿ ದೇಶದ ನಾನಾ ಭಾಗಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅರೇಬಿಕ್ ಮತ್ತು ಇಸ್ಲಾಂ ಶಿಕ್ಷಣವನ್ನು ಹೇಳಿಕೊಡುತ್ತಿದ್ದಾರೆ. ಅಲ್ಲದೇ ಇಲ್ಲಿಯೇ ಅವರೇಲ್ಲರೂ ವಾಸ್ತವ್ಯ ಹೂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ
Advertisement
Advertisement
ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ ಸ್ಮಾರಕಗಳಲ್ಲಿ ಈ ರೀತಿಯ ಚಟುವಟಿಕೆಗಳನ್ನು ನಡೆಸುವ ಹಾಗೆ ಇಲ್ಲ. ಆದ್ರೆ ಐತಿಹಾಸಿಕ ಸ್ಮಾರಕವಾಗಿರುವ ಜಾಮಿಯಾದಲ್ಲಿ ಈ ರೀತಿ ಚಟುವಟಿಕೆ ಮಾಡುತ್ತಿರುವುದು ಸರಿಯಲ್ಲ. ಅಲ್ಲಿರುವರನ್ನು ಇಲ್ಲಿಂದ ಕಳುಹಿಸಬೇಕೆಂದು ನೂರಾರು ಸಂಖ್ಯೆಯಲ್ಲಿದ್ದ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಒಟ್ಟಾರೆ ಜಾಮಿಯಾ ಮಸೀದಿಯಲ್ಲಿ ಮದರಸಾ ಮಾಡಿಕೊಂಡಿರುವುದು ಕಾನೂನು ಪ್ರಕಾರ ತಪ್ಪು. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನವರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.