ಮಂಡ್ಯ: ಜಾಮಿಯಾ ಮಸೀದಿ (Jamiya Masjid) ವಿವಾದವನ್ನು ಕೆಣಕಿ ಬಿಜೆಪಿ (BJP) ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ರಾಜಕೀಯ (Politics) ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅಸಮಾಧಾನ ಹೊರಹಾಕಿದ್ದಾರೆ.
Advertisement
ಮಂಡ್ಯದ (Mandya) ಬೇವಿನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ (BJP) ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಧರ್ಮದ ವಿಚಾರ ಬಳಕೆ ಮಾಡಿಕೊಂಡು ರಾಜಕೀಯ ಮಾಡುವುದು ಮಾತ್ರ ಗೊತ್ತು. ಆ ಕಾರಣಕ್ಕಾಗಿಯೇ ಅವರು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದವನ್ನು ಕೆಣಕುತ್ತಿದ್ದಾರೆ. ಜನರ ಭಾವನಾತ್ಮಕತೆ ಬಳಸಿಕೊಂಡು ರಾಜಕೀಯವಾಗಿ ಅವರು ಯಶಸ್ವಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕನ ಅಟ್ಟಹಾಸಕ್ಕೆ 2ನೇ ಬಲಿ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಶಿಕ್ಷಕಿ ಸಾವು
Advertisement
Advertisement
ಮಂಡ್ಯ ಜಿಲ್ಲೆ ಕರಾವಳಿ ಪ್ರದೇಶವಲ್ಲ, ಕರಾವಳಿ ಪ್ರದೇಶದ ಜನರ ಜೀವನ ಶೈಲಿ ಹಾಗೂ ವಾತಾವರಣ ಬೇರೆ. ಮಂಡ್ಯ ಜಿಲ್ಲೆಯ ಜನರ ಜೀವನ ಶೈಲಿ ಮತ್ತು ವಾತಾವರಣವೇ ಬೇರೆ. ಮಂಡ್ಯದ ಜನರು ಶ್ರಮಜೀವಿಗಳು, ಇಲ್ಲಿ ಬಿಜೆಪಿ ಅವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಹೋದರೆ ಅವರಿಗೆ ಮುಳುವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?