ನಭಕ್ಕೆ ಚಿಮ್ಮಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ – ಬ್ರಹ್ಮಾಂಡ ರಹಸ್ಯವನ್ನು ಅರಿಯುವ ಕಾಲ ಸನಿಹ

Public TV
2 Min Read
james webb space telescope 3

ಫ್ರೆಂಚ್ ಗಯಾನ: ಖಗೋಳ ಲೋಕದಲ್ಲಿ ಇವತ್ತಿಂದ ಹೊಸ ಅಧ್ಯಾಯ ಶುರುವಾಗಿದೆ. ಬ್ರಹ್ಮಾಂಡದ ರಹಸ್ಯವನ್ನು ಅರಿಯುವ ಟೈಮ್ ಮಷಿನ್, ವಿಶ್ವಕನ್ನಡಿ ಎಂದೇ ಹೇಳಲಾಗುತ್ತಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಹೊತ್ತ ಏರಿಯನ್-5 ರಾಕೆಟ್ ಅಮೆರಿಕಾದ ಫ್ರೆಂಚ್ ಗಯಾನದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.

James Webb Space Telescope

ಭಾರತೀಯ ಕಾಲಮಾನ ಸಂಜೆ 5:30ಕ್ಕೆ ಸರಿಯಾಗಿ ಏರಿಯಾನ್ ರಾಕೆಟ್ ಉಡಾವಣೆಗೊಂಡಿದೆ. ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಆರಂಭಿಕ ಖುಷಿಯಲ್ಲಿ ತೇಲಾಡಿದ್ದು, ಈ ಮಹಾ ಪಯಣ ಸರಿಸುಮಾರು ಒಂದು ತಿಂಗಳು ಸಾಗಲಿದ್ದು, ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಜೇಮ್ಸ್ ಟೆಲಿಸ್ಕೋಪ್‍ನ್ನು ಫಿಕ್ಸ್ ಮಾಡಲಾಗುತ್ತದೆ. ಅಲ್ಲಿಂದಲೇ ಟೈಮ್ ಮಷಿನ್ ಮಾದರಿಯಲ್ಲಿ ಸಾವಿರಾರು ವರ್ಷಗಳ ಹಿಂದಕ್ಕೆ, ಮುಂದಕ್ಕೆ ಹೋಗಿ ಸೃಷ್ಟಿ ರಹಸ್ಯವನ್ನು ಅರಿಯುವ ಕೆಲಸವನ್ನು ಜೇಮ್ಸ್ ಸ್ಪೇಸ್ ಟೆಲಿಸ್ಕೋಪ್ ಮಾಡಲಿದೆ. ಇದನ್ನೂ ಓದಿ: ಬ್ರಹ್ಮಾಂಡದ ಸೃಷ್ಟಿ ರಹಸ್ಯ ಅರಿಯಲು ಟೈಮ್ ಮಷಿನ್ – ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ವಿಶೇಷತೆ ಏನು?

ಜೇಮ್ಸ್ ಸ್ಪೇಸ್ ಟೆಲಿಸ್ಕೋಪ್ ಉಡಾವಣೆ ಆದ ನಂತರ ನಿಗದಿತ ಸ್ಥಳ ಸೇರಲು ಒಂದು ತಿಂಗಳು ಹಿಡಿಯುತ್ತದೆ. ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರ ಮಾಡಲಾಗುತ್ತದೆ. ಇಲ್ಲಿಂದ ವಿಶ್ವವನ್ನು ತುಂಬಾ ಸ್ಪಷ್ಟವಾಗಿ ಗಮನಿಸಲು ಅವಕಾಶ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ಮುಂದಿನ ನಾಲ್ಕು ಶತಮಾನಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕೇವಲ 10 ವರ್ಷಗಳಲ್ಲಿ ತಿಳಿದುಕೊಳ್ಳಬಹುದಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ನ್ನು ಅಮೆರಿಕದ ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದು, ಇದು ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ಗೆ ಇನ್‍ಫ್ರಾರೆಡ್ ವಿಷನ್ ಮೂಲಕ 1,350 ವರ್ಷಗಳ ಹಿಂದಕ್ಕೆ ಹೋಗಿ ಅಲ್ಲೇನು ನಡೆದಿದೆ ಎಂಬುದನ್ನು ತಿಳಿಸುವ ಅದ್ಭುತ ಸಾಮರ್ಥ್ಯ ಇರುವುದು ವಿಶೇಷ.

james webb space telescope 5 scaled

ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು. ಅವುಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ. ಇದನ್ನು ಕೆಲವರು ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್ ಎಂದು ಕರೆಯುತ್ತಾರೆ. 2007ರಲ್ಲೇ ಇದನ್ನು ಪ್ರಯೋಗಿಸಲು ಸಿದ್ಧತೆ ನಡೆದಿತ್ತು. ಆದ್ರೆ ಇದು ಸಾಧ್ಯನಾ ಎಂದು ತುಂಬಾ ಮಂದಿ ಅನುಮಾನಿಸಿದ್ದರು. ಈಗ 75 ಸಾವಿರ ಕೋಟಿ(10 ಶತಕೋಟಿ ಡಾಲರ್) ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

ವಿಶೇಷತೆ ಏನು?
ಹಬಲ್ ಟೆಲಿಸ್ಕೋಪ್‍ಗಿಂತ ಜೇಮ್ಸ್ ಟೆಲಿಸ್ಕೋಪ್ ವಿಸ್ತೀರ್ಣದಲ್ಲಿ ಎರಡೂವರೆ ಪಟ್ಟು ದೊಡ್ಡದು. ಕಾಂತಿಯನ್ನು ಗ್ರಹಿಸಲು ಅಳವಡಿಸಲಾದ ಪ್ರಧಾನ ಕನ್ನಡಿಯ ಅಗಲ 6.5 ಮೀಟರ್ ಇದೆ. ಈ ಪ್ರಧಾನ ಕನ್ನಡಿಯನ್ನು 18 ಷಟ್‍ಭುಜಾಕೃತಿಗಳಾಗಿ ವಿಂಗಡಿಸಿ ನಿರ್ಮಿಸಲಾಗಿದೆ.

ಉಡಾವಣೆ ವೇಳೆ ಈ ಕನ್ನಡಿ ಮಡಚಿಟ್ಟ ಸ್ಥಿತಿಯಲ್ಲಿ ಇರುತ್ತದೆ. ಗಮ್ಯ ಸೇರಿದ ನಂತರ ತೆರೆದುಕೊಳ್ಳಲಿದೆ. ಸೂರ್ಯನ ಕಡೆ ಇರುವ ಟೆಲಿಸ್ಕೋಪ್ ಭಾಗ 22 ಮೀಟರ್ ಉದ್ದವಿದ್ದು ಇದು 85 ಡಿಗ್ರಿವರೆಗೂ ಬಿಸಿಯೇರಬಹುದು. ಟೆಲಿಸ್ಕೋಪ್‍ಗೆ ಆಗುವ ಸಂಭಾವ್ಯ ಹಾನಿ ತಡೆಯಲು ಏಳು ಸುತ್ತಿನ ರಕ್ಷಣಾ ಕವಚ ನಿರ್ಮಾಣ ಮಾಡಲಾಗಿದೆ.

ಸೂರ್ಯನಿಗೆ ವಿರುದ್ಧವಿರುವ ಭಾಗ -233 ಡಿಗ್ರಿ ಸೆಂಟಿಗ್ರೇಡ್ ಇದ್ದು ಅತೀಶೀತಲವಾಗಿರುತ್ತದೆ. 40 ಕಿಲೋಮೀಟರ್ ದೂರದಲ್ಲಿರುವ ಒಂದು ನಾಣ್ಯವನ್ನು ಸ್ಪಷ್ಟವಾಗಿ ತೋರಿಸುವ ಸಾಮರ್ಥ್ಯ ಈ ಉಪಗ್ರಹಕ್ಕಿದೆ.

Share This Article