ಎರಡು ದಿನಗಳ ಹಿಂದೆ ಬಿಪಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿದ್ದರೂ, ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದಿದ್ದಾರೆ ಅಪೋಲೊ ಆಸ್ಪತ್ರೆ ವೈದ್ಯರು. ಹಾಗಾಗಿ ಇನ್ನೂ ಒಂದು ವಾರ ಕಿಶೋರ್ ಐಸಿಯುನಲ್ಲೇ ಇರಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯರು, ‘ ಆಸ್ಪತ್ರೆಗೆ ಕಿಶೋರ್ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಲೆಫ್ಟ್ ಬ್ರೈನ್ ಬಳಿ ಬ್ಲಡ್ ಕ್ಲಾಟ್ ಆಗಿತ್ತು. ಇಮಿಡಿಯೇಟ್ ಸರ್ಜರಿ ಮಾಡಿದೆವು. ಸದ್ಯ ಅವರಿಗೆ ಪ್ರಜ್ಞೆ ಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ಒಂದು ವಾರ ಕಾಲ ಐಸಿಯುನಲ್ಲೇ ಇರಬೇಕಾಗುತ್ತದೆ. ವೆಂಟಿಲೇಟರ್ ತೆಗೆಯಲು ನೋಡಿದ್ವಿ. ಆದ್ರೆ ಸದ್ಯಕ್ಕಿನ್ನೂ ಆಗ್ತಿಲ್ಲ. ತುಂಬಾ ರೆಸ್ಟ್ ಲೇಸ್ ಆಗಿರೋದ್ರಿಂದ ಈ ರೀತಿ ಆಗಿದೆ. ಅವರು ತುಂಬಾ ರೆಸ್ಟ್ ಮಾಡಬೇಕಾಗುತ್ತೆ’ ಎಂದಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್
Advertisement
Advertisement
ಕಿಶೋರ್ ಅವರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದರೂ, ಕೆಲ ತಿಂಗಳುಗಳ ಕಾಲ ಅವರು ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದೂ ವೈದ್ಯರು ಹೇಳಿದ್ದಾರೆ. ‘ಲೆಫ್ಟ್ ಬ್ರೈನ್ ಆಗಿರೋದ್ರಿಂದ ಮಾತನಾಡೋದಕ್ಕೆ ಸ್ವಲ್ಪ ಸಮಯವಾಗಬಹುದು. ಫಿಸಿಯೋತೆರಪಿ ಮಾಡಸಿಕೊಂಡರೆ ಸರಿ ಹೋಗುತ್ತದೆ. ಸ್ಟ್ರೋಕ್ ನಿಂದ ರೈಟ್ ಸೈಡ್ ಸ್ವಲ್ಪ ಸ್ವಾಧೀನ ಕಳೆದುಕೊಂಡಿದ್ದಾರೆ. ಈಗಲೂ ಕೂಡ ಸ್ವಲ್ಪ ಅವರ ಆರೋಗ್ಯ ಸ್ಥಿತಿ ಗಂಭೀರವೆ ಇದೇ. ಇನ್ನೂ ಒಂದು ವಾರ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಯಲಿದೆ’ ಎಂದಿದ್ದಾರೆ ವೈದ್ಯರು. ಈಗಾಗಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕಿಶೋರ್ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆ.