BollywoodCinemaLatestLeading NewsMain Post

ಹಾಲಿವುಡ್ ‘ದಿ ಗಾಡ್ ಫಾದರ್’ ಖ್ಯಾತಿಯ ಜೇಮ್ಸ್ ಕಾನ್ ನಿಧನ

Advertisements

ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಹಾಲಿವುಡ್ ಖ್ಯಾತ ನಟ ಜೇಮ್ಸ್ ಕಾನ್ ನಿಧನರಾಗಿದ್ದಾರೆ. ದಿ ಗಾಡ್ ಫಾದರ್ ಜೇಮ್ಸ್ ಎಂದೇ ಖ್ಯಾತರಾಗಿದ್ದ ಇವರು, ಬುಧವಾರ (ಜು.6) ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನೇ ನೀಡಿರುವ ಈ ಅಮೆರಿಕಾದ ನಟನಿಗೆ ವಿಶ್ವದಾದ್ಯಂತ ಅಭಿಮಾನಿಗಳು, ಸಿಲೆಬ್ರಿಟಿಗಳು ಮತ್ತು ಆಪ್ತರು ಕಂಬನಿ ಮಿಡಿದಿದ್ದಾರೆ.

ಆರು ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದ ಈ ಕಲಾವಿದ ಮಾಡಿದ ಸಿನಿಮಾಗಳೆಲ್ಲವೂ ಕ್ಲಾಸಿಕ್. ಬಾಲ್ಯದಲ್ಲಿಯೇ ಸಿನಿಮಾ ರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಜೇಮ್ಸ್ ಕಾನ್, ಮೊದ ಮೊದಲು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಂತರ ಟಿವಿ ಶೋಗಳಿಗೆ ಲಗ್ಗೆ ಇಟ್ಟರು. ಟಿವಿಯಲ್ಲಿ ಶೋಗಳನ್ನು ನಡೆಸುತ್ತಲೇ ಸಿನಿಮಾ ರಂಗಕ್ಕೂ ಬಂದರು. 1965ರಲ್ಲಿ ಎಲ್ ಡೊರಾಡೋ ಸಿನಿಮಾ ಮೂಲಕ ಹೀರೋ ಆದರೂ, ಅದಕ್ಕೂ ಮುನ್ನ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದನ್ನೂ ಓದಿ:ಇಸ್ಮಾರ್ಟ್ ಜೋಡಿಗೆ ಜೊತೆಯಾಗಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಜೇಮ್ಸ್ ವೃತ್ತಿ ಜೀವನದಲ್ಲಿ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟ ಸಿನಿಮಾ ದಿ ಗಾಡ್ ಫಾದರ್. ಈ ಸಿನಿಮಾದ ಸನ್ನಿ ಕಾರ್ಲಿಯೋನ್ ಪಾತ್ರವು ಸಾಕಷ್ಟು ಜನಪ್ರಿಯತೆ ಪಡೆಯಿತು. ಕೆಲವು ವರ್ಷಗಳ ಕಾಲ ಇದೇ ಹೆಸರಿನಿಂದಲೇ ಇವರು ಗುರುತಿಸಿಕೊಂಡರು. ಸನ್ನಿ ಕಾರ್ಲಿಯೋನ್ ಪಾತ್ರಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಗೂ ನಾಮಿನೇಟ್ ಆಗಿದ್ದರು.

Live Tv

Leave a Reply

Your email address will not be published.

Back to top button