-ಸ್ಮೈಲಿ ಎಮೋಜಿ ಹಾಕಿದ ಸ್ಟುವರ್ಟ್ ಬ್ರಾಡ್
ಲಂಡನ್: ಇಂಗ್ಲೆಂಡ್ ಬೌಲರ್ ಜೇಮ್ಸ್ ಆ್ಯಂಡರಸನ್ ಗಾಲ್ಫ್ ಆಡುವ ವೇಳೆ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಜೇಮ್ಸ್ ಗಾಲ್ಫ್ ಆಡುವ ಆಟದ ವಿಡಿಯೋವನ್ನು ಬೌಲರ್ ಸ್ಟುವರ್ಟ್ ಬ್ರಾಡ್ ತಮ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ತುಂಬಾ ಮರಗಳ ಮಧ್ಯದಲ್ಲಿ ಜೇಮ್ಸ್ ಆ್ಯಂಡರಸನ್ ಗಾಲ್ಫ್ ಆಡುವ ಸಾಹಸಕ್ಕೆ ಮುಂದಾಗಿದ್ದಾರೆ. ಚೆಂಡನ್ನು ಸ್ಟಿಕ್‍ನಿಂದ ಹೊಡೆದಾಗ ಅದು ಎದುರಿಗೆ ಮರಕ್ಕೆ ತಾಗಿ ಜೇಮ್ಸ್ ಮುಖಕ್ಕೆ ತಗುಲಿದೆ. ಈ ಎಲ್ಲ ದೃಶ್ಯಗಳಿರುವ ವಿಡಿಯೋವನ್ನು ಬ್ರಾಡ್ ತಮ್ಮ ಟ್ವಿಟ್ಟರ್ ಹಾಕಿಕೊಂಡು, ಜೇಮ್ಸ್ ಚೆನ್ನಾಗಿದ್ದು, ಹೆಚ್ಚಿನ ಗಾಯಗಳಾಗಿಲ್ಲ ಎಂದು ಹೇಳುತ್ತಾ ಕೊನೆಗೆ ನಗುತ್ತಿರುವ ಎಮೋಜಿಗಳನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಜೇಮ್ಸ್, ನನಗೆ ಏನೂ ಆಗಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಜ್‍ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟದ ಬಳಿಕವೂ ಇಂಗ್ಲೆಂಡ್ 31 ರನ್ ರೋಚಕ ಗೆಲುವು ಪಡೆದಿತ್ತು. ಈ ಮೂಲಕ ಐತಿಹಾಸಿಕ 1000 ನೇ ಟೆಸ್ಟ್ ಪಂದ್ಯ ಗೆದ್ದು ಇಂಗ್ಲೆಂಡ್ ಡಬಲ್ ಸಂಭ್ರಮವನ್ನು ಆಚರಿಸಿತ್ತು.
110ಕ್ಕೆ 5 ವಿಕೆಟ್ ಕಳೆದು ಕೊಂಡು ನಾಲ್ಕನೇಯ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಗೆಲ್ಲಲು 84 ರನ್ ಗಳು ಮಾತ್ರ ಅಗತ್ಯವಿತ್ತು. ಆದರೆ ದಿನದಾಟದ ಆರಂಭದಲ್ಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (20) ಔಟಾಗುವ ಮೂಲಕ ಟೀಂ ಇಂಡಿಯಾ ಆಘಾತ ಎದುರಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ವಿರಾಟ್ ಕೊಹ್ಲಿ 2ನೇ ಇನ್ನಿಂಗ್ಸ್ ನಲ್ಲೂ ದಿಟ್ಟ ಹೋರಾಟ ನಡೆಸಿ ಅರ್ಧಶತಕ ಗಳಿಸಿದ್ದರು. ಆದರೆ ಈ ವೇಳೆ 51 ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ತಂಡಕ್ಕೆ ಆಘಾತ ನೀಡಿದ್ದರು. ಕೊಹ್ಲಿ ವಿಕೆಟ್ ಕಳೆದುಕೊಂಡ ವೇಳೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಆದರೆ ಅದೇ ಓವರ್ ನಲ್ಲಿ ಮಹಮ್ಮದ್ ಶಮಿ ವಿಕೆಟ್ ಪಡೆದ ಬೆನ್ ಸ್ಟೋಕ್ಸ್ ತಂಡಕ್ಕೆ ಡಬಲ್ ಅಘಾತ ನೀಡಿದ್ದರು.
ಮೊದಲ ಟೆಸ್ಟ್ ಪಂದ್ಯದ ಆರಂಭದಿಂದಲೂ ಏಳು ಬೀಳು ಕಂಡ ವಿರಾಟ್ ಬಳಗ ಕೊನೆಗೂ ಸೋಲುಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಪಂದ್ಯದ ನಂತರ ಮಾತನಾಡಿದ ಟೀಂ ಇಂಡಿಯಾ ಕ್ಯಾಪ್ಟನ್ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಸೋಲಲು ತಂಡದ ಆಟಗಾರರ ಕಳಪೆ ಬ್ಯಾಟಿಂಗ್ ಕಾರಣ. ಆದರೆ ರೋಚಕ ಪಂದ್ಯದಲ್ಲಿ ಭಾಗವಹಿಸಿದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews
A) @jimmy9 is perfectly fine.
B) ???????????????????????????????????? pic.twitter.com/oaf0Px3Wab
— Stuart Broad (@StuartBroad8) August 5, 2018