ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ, ಮಾದಕ ವಸ್ತುಗಳು ಲಭ್ಯವಾಗಿದೆ. ಈ ರೇವ್ ಪಾರ್ಟಿಯಲ್ಲಿ ತೆಲುಗು ನಟಿ-ನಟಿಯರ ಹೆಸರು ಕೇಳಿ ಬಂದಿದೆ. ಜೊತೆಗೆ ತೆಲುಗಿನ ನಟ ಶ್ರೀಕಾಂತ್ (Srikanth) ಹೆಸರು ಕೇಳಿ ಬಂದ ಬೆನ್ನಲ್ಲೇ, ನಾನು ಯಾವ ರೇವ್ ಪಾರ್ಟಿಗೂ ಹೋಗಿಲ್ಲ ಎಂದು ವಿಡಿಯೋ ಮೂಲಕ ಸ್ಟಷ್ಟನೆ ನೀಡಿದ್ದಾರೆ.
Advertisement
ನಾನು ನನ್ನ ಹೈದರಾಬಾದ್ ಮನೆಯಲ್ಲಿ ನಿಂತಿದ್ದೇನೆ. ಜನರು ಇದನ್ನು ಪರಿಶೀಲಿಸಬಹುದು. ಬೆಂಗಳೂರಿನಲ್ಲಿ ಪೊಲೀಸರು ದಾಳಿ ನಡೆಸಿದ ರೇವ್ ಪಾರ್ಟಿಯಲ್ಲಿ ನನ್ನ ಹೆಸರು ಕೇಳಿ ಬಂದಿದ್ದು ನೋಡಿ ನನಗೆ ಆಶ್ಚರ್ಯ ಆಯಿತು. ನನ್ನ ಸ್ನೇಹಿತರು ಈ ಬಗ್ಗೆ ವಿಚಾರಿಸಲು ಕರೆ ಮಾಡಿದ್ದರು. ಈ ಸುದ್ದಿ ಕೇಳಿ ಮೊದಲಿಗೆ ನನ್ನ ಕುಟುಂಬಸ್ಥರು ನಕ್ಕರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೇಕ ಸುದ್ದಿಗಳು ಹರಿದಾಡಲು ಆರಂಭಿಸಿದಾದ ನಾನು ಸ್ಪಷ್ಟನೆ ನೀಡಲು ನಿರ್ಧರಿಸಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
Advertisement
*రేవ్ పార్టీలు, పబ్లకు వెళ్లే వ్యక్తిని నేను కాదు.. తప్పుడు కథనాలను నమ్మకండి – నటుడు శ్రీకాంత్*
@actorsrikanth #Srikanth #Tollywood pic.twitter.com/ZnoyXpI5ll
— Suresh Kondeti (@santoshamsuresh) May 20, 2024
Advertisement
ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಮಾಧ್ಯಮದ ಅನೇಕ ಸ್ನೇಹಿತರು ನನಗೆ ಕರೆ ಮಾಡಿ ವಿಷಯವನ್ನು ಸ್ಪಷ್ಟಪಡಿಸಿಕೊಂಡರು. ಆದರೆ ಕೆಲವು ವಾಹಿನಿಯವರು ಅಸಲಿ ವಿಚಾರ ಅರಿಯದೇ ಸುದ್ದಿ ಪ್ರಸಾರ ಮಾಡಿದರು. ಅದು ಅವರ ತಪ್ಪಲ್ಲ. ಯಾಕೆಂದರೆ, ಮೊದಲ ಬಾರಿಗೆ ನಾನು ವಿಡಿಯೋಗಳಲ್ಲಿ ಗಡ್ಡ ಇರುವ ವ್ಯಕ್ತಿ ಮುಖ ಮುಚ್ಚಿಕೊಂಡಿದ್ದನ್ನು ನೋಡಿದಾಗ ನನ್ನ ರೀತಿ ಕಾಣಿಸಿದ್ದಾನೆ ಎಂದಿದ್ದಾರೆ. ಇದನ್ನೂ ಓದಿ:‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಪೋಸ್ಟರ್ ಔಟ್- ತ್ರಿಬಲ್ ರೋಲ್‌ನಲ್ಲಿ ಅಜಿತ್?
Advertisement
ನಾನು ಮತ್ತೆ ಸ್ಪಷ್ಟನೆ ನೀಡುತ್ತೇನೆ. ರೇವ್ ಪಾರ್ಟಿಗಳಿಗೆ ಹೋಗುವ ಅಭ್ಯಾಸ ನನಗೆ ಇಲ್ಲ. ರೇವ್ ಪಾರ್ಟಿ, ಪಬ್ ಕಲ್ಚರ್ ಅನ್ನು ನಾನು ಫಾಲೋ ಮಾಡಲ್ಲ. ಕೆಲವೊಮ್ಮೆ ನಾನು ಬರ್ತ್‌ಡೇ ಪಾರ್ಟಿಗಳಿಗೆ ಹೋಗುತ್ತೇನೆ. ಆದರೆ ಅರ್ಧ ಗಂಟೆಯೊಳಗೆ ವಾಪಸ್ ಬರುತ್ತೇನೆ. ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಅದರ ಸತ್ಯ ಸಂಗತಿಯನ್ನು ಖಚಿತಪಡಿಸಿಕೊಳ್ಳಿ ಎಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಶ್ರೀಕಾಂತ್ ಮಾತನಾಡಿದ್ದಾರೆ.