-ಭೂಕಂಪದಿಂದ ಸಮಸ್ಯೆಯಾದವರಿಗೆ ಸಹಾಯ ಮಾಡಲು ಹೇಳಿದ್ದೇನೆ; ಮಖ್ಸುದ್
ಬೆಂಗಳೂರು: ಭಾರತದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಅನ್ಯೋನ್ಯತೆಯಿಂದ ಬಾಳಲಿ ಎಂದು ಕೇಳಿಕೊಂಡೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು.
ರಂಜಾನ್ (Ramjaan) ಹಬ್ಬದ ಸಲುವಾಗಿ ಚಾಮರಾಜಪೇಟೆಯ (Chamarajapete) ಈದ್ಗಾ ಮೈದಾನದಲ್ಲಿ (Eidga Ground) ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಜನರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. 30 ದಿವಸ ನಾವು ಉಪವಾಸದಿಂದ ಇದ್ದೇವೆ. ರಂಜಾನ್, ಬಕ್ರೀದ್ ನಮಗೆ ದೊಡ್ಡ ಹಬ್ಬ. ನಿನ್ನೆ ಹಿಂದೂಗಳಿಗೆ ದೊಡ್ಡ ಹಬ್ಬ. ಇಂದು ನಮಗೆ ದೊಡ್ಡ ಹಬ್ಬವಾಗಿದೆ. ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಭಾರತದಲ್ಲಿ ಅನ್ಯೋನ್ಯತೆಯಿಂದ ಬಾಳಲಿ ಅಂತ ಕೇಳಿಕೊಂಡೆ. 9.35 ಸಿಎಂ ಫೋನ್ ಮಾಡಿದ್ದರು. ಆರೋಗ್ಯ ಸಮಸ್ಯೆ ಹಿನ್ನಲೆ ಅವರು ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಆರೋಗ್ಯ ಕೊಡಲಿ ಎಂದು ಬೇಡಿದ್ದೇವೆ ಎಂದರು. ಇದನ್ನೂ ಓದಿ: ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಂಚ್ ಡೇಟ್- ಮತ್ತೆ ಡೇಟಿಂಗ್ ಬಗ್ಗೆ ಶುರುವಾಯ್ತು ಚರ್ಚೆ
ಕಪ್ಪು ಪಟ್ಟಿ ಧರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ಇಡೀ ದೇಶದಲ್ಲಿ ಇವತ್ತು ಕಪ್ಪು ಪಟ್ಟಿ ಧರಿಸಿದ್ದೇವೆ. ವಕ್ಫ್ ಬಿಲ್ (Waqf Bill) ತರಬಾರದು ಎಂಬುದು ನಮ್ಮ ಬೇಡಿಕೆಯಾಗಿದೆ. ನಮ್ಮ ರಾಜ್ಯ ಸರ್ಕಾರದಿಂದ ಬೆಂಬಲ ಇಲ್ಲ ಎಂದು ಹೇಳಿದರು.
ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಖ್ಸುದ್ ಇಮ್ರಾನ್ ಅವರು ಮಾತನಾಡಿ, ನಮ್ಮ ರಂಜಾನ್ ಹಬ್ಬದಲ್ಲಿ ಎಲ್ಲರೂ ಉಪವಾಸ ಮಾಡಿ ಮೈದಾನದಲ್ಲಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದುಡ್ಡಿಲ್ಲದೇ ಇರೋರಿಗೆ ದಾನ ಮಾಡಬೇಕು. ಬಡವರಿಗೆ ದಾನ ಮಾಡಬೇಕು ಎಂದು ಸಂದೇಶ ನೀಡಿದರು. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೆ ಶಾಕ್ – ಟ್ರಾನ್ಸ್‌ಫಾರ್ಮರ್, ಜನರೇಟರ್ ಪರಿಶೀಲನೆ & ರಿನೀವಲ್ ಶುಲ್ಕ 3 ಪಟ್ಟು ಏರಿಕೆ!
ನಿನ್ನೆ ಯುಗಾದಿ ಆಯ್ತು, ನಾವು ಹಿಂದೂಗಳಿಗೆ ಶುಭ ಹಾರೈಸಿದ್ದೇವೆ. ಇವತ್ತು ರಂಜಾನ್ ನಡೆಯುತ್ತಿದೆ. ಈದ್ ಹಬ್ಬದಲ್ಲಿ ಹಿಂದೂಗಳು ಮುಸ್ಲಿಂರನ್ನು ವೆಲ್‌ಕಂ ಮಾಡುತ್ತಾರೆ. ಪೊಲೀಸ್ ಅವರು ಡ್ಯೂಟಿ ಮಾಡುತ್ತಾರೆ. ಮಾಧ್ಯಮದವರೂ ಹಿಂದೂಗಳಿರುತ್ತಾರೆ. ಎಲ್ಲಾ ಹಿಂದೂಗಳಿಗೆ ಗಿಫ್ಟ್ ಕೊಡಿ. ಆಗ ಜನರಿಗೆ ಸಂತೋಷ ಆಗುತ್ತದೆ. ನಮ್ಮ ರಂಜಾನ್‌ನಲ್ಲಿ ನಾವು ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಭೂಕಂಪನದಿಂದ ಸಮಸ್ಯೆಯಾದವರಿಗೆ ಸಹಾಯ ಹಸ್ತ ನೀಡಲು ಹೇಳಿದ್ದೇನೆ. ಪ್ರಪಂಚದಾದ್ಯಂತ ಅವರಿಗೆ ಸಹಾಯ ಸಿಗಲಿ, ಭೂ ಕಂಪನದಲ್ಲಿ ಸಮಸ್ಯೆ ಆದವರಿಗೆ ಗಿಫ್ಟ್ ಕಳುಹಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ನಾಳೆಯಿಂದ ದುನಿಯಾ ದುಬಾರಿ – ಹಾಲು, ಮೊಸರು ದುಬಾರಿ.. ಕಸಕ್ಕೂ ಕಾಸು, ಯಾವುದಕ್ಕೆ ಎಷ್ಟು ದರ ಹೆಚ್ಚಳ?
ಕಪ್ಪು ಪಟ್ಟಿ ಧರಿಸಿದ ವಿಚಾರವಾಗಿ ಪ್ರತಿಕ್ರಿಸಿದ ಅವರು ವಕ್ಫ್ ಬಿಲ್ ವಿಚಾರ ಸಂಸತ್ತಿನಲ್ಲಿ ಬರುತ್ತಿದೆ. ಈ ಬಗ್ಗೆ ಕೈಯಲ್ಲಿ ಕಪ್ಪು ಪಟ್ಟಿ ಧರಿಸಿ ಇದು ಸರಿ ಇಲ್ಲ ಅಂತ ಸಂದೇಶ ಕೊಟ್ಟಿದ್ದೇವೆ. ಬಾಯಿಂದ ನಾವು ಏನು ಹೇಳಿಲ್ಲ. ಆದರೆ ಈ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರಕ್ಕೆ ಸಂದೇಶ ಕೊಡುತ್ತಾ ಇದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಯುಗಾದಿ ಹಬ್ಬದ ಹಿನ್ನೆಲೆ ಪತ್ನಿ ಜೊತೆ ಡಾಲಿ ಟೆಂಪಲ್ ರನ್
ರಿಲೀಫ್ ಫಂಡ್ ವಿಚಾರವಾಗಿ ಮಾತನಾಡಿ, ನಮ್ಮ ಸೆಂಟ್ರಲ್ ಬೋರ್ಡ್ ಅಥವಾ ಕಮಿಟಿ ಮುಖ್ಯಸ್ಥರು ಅನುಮತಿ ಕೊಟ್ಟರೆ ನಾವು ಯೋಚನೆ ಮಾಡುತ್ತೇವೆ ಎಂದರು.