ಬೆಂಗಳೂರು: ಗೋವಿಂದ.. ಗೋವಿಂದ ಎನ್ನುತ್ತ ವೆಂಕಟರಮಣ ಸ್ವಾಮಿಯ ಜಾತ್ರೆಯ ತೇರು ಎಳೆಯುವ ಮೂಲಕ ಶಾಸಕ ಜಮೀರ್ ಅಹ್ಮದ್ ಸೌಹಾರ್ದತೆ ಮೆರೆದಿದ್ದಾರೆ.
ಇಲ್ಲಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮಕ್ಕಳ ಕೂಟದ ಬಳಿಯಿರುವ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ತೇರು ಎಳೆದಿದ್ದಾರೆ. ಇದನ್ನೂ ಓದಿ: ಇಸ್ಲಾಂ ಅನ್ನೋದು ಧರ್ಮವಲ್ಲ, ಕಾಮುಕರ ಗ್ಯಾಂಗ್: ರಾಧಾಕೃಷ್ಣ ಅಡ್ಯಂತಾಯ ವಿವಾದಾತ್ಮಕ ಹೇಳಿಕೆ
Advertisement
Advertisement
ವೆಂಕಟರಮಣ ಗೋವಿಂದ.. ಗೋವಿಂದ ಎನ್ನುತ್ತ ಕೋಟೆ ವೆಂಕಟರಮಣ ದೇಗುಲದ ಜಾತ್ರೆಯ ತೇರು ಎಳೆದಿದ್ದಾರೆ. ಜಾತ್ರೆಯ ತೇರನ್ನು ಎಳೆದು ಮಂಗಳಾರತಿ ತೀರ್ಥ, ಪ್ರಸಾದ ತೆಗೆದುಕೊಂಡಿದ್ದಾರೆ. ಇದೇ ವೇಳೆ ನೆರೆದಿದ್ದ ಜನಸ್ತೋಮಕ್ಕೆ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್
Advertisement
Advertisement
ರಾಜ್ಯದಲ್ಲಿ ಧರ್ಮ ದಂಗಲ್ ತಲೆದೋರಿರುವ ಸಂದರ್ಭದಲ್ಲಿ ಜಮೀರ್ ಅಹ್ಮದ್ ಸೌಹಾರ್ದತೆ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಎಂದು ಉತ್ತರ ಪ್ರದೇಶದಲ್ಲಿ ಆದೇಶ ಹೊರಡಿಸಿದ ಸಂದರ್ಭದಲ್ಲಿ, ಜಮೀರ್ ಅವರು ರಾಷ್ಟ್ರಗೀತೆ ಹಾಡುವ ಮೂಲಕ ದೇಶಪ್ರೇಮ ಮೆರೆದಿದ್ದರು.