Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಜಂಬೂ ಸರ್ಕಸ್’ : ರಿಲೀಸ್ ಆಯ್ತು ಮನಸೋತೆ ಮನಸಾರೆ ಸಾಂಗ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ‘ಜಂಬೂ ಸರ್ಕಸ್’ : ರಿಲೀಸ್ ಆಯ್ತು ಮನಸೋತೆ ಮನಸಾರೆ ಸಾಂಗ್

Cinema

‘ಜಂಬೂ ಸರ್ಕಸ್’ : ರಿಲೀಸ್ ಆಯ್ತು ಮನಸೋತೆ ಮನಸಾರೆ ಸಾಂಗ್

Public TV
Last updated: August 19, 2024 6:10 pm
Public TV
Share
3 Min Read
Jamboo Circus 2
SHARE

ಕನ್ನಡದ ಚಲನಚಿತ್ರದ ಸುಪ್ರಸಿದ್ದ ನಿರ್ದೇಶಕ ಎಂ ಡಿ ಶ್ರೀಧರ್ (MD Shridhar) ಇದುವರೆವಿಗೂ ನಿರ್ದೇಶನ ಮಾಡಿದ ಸಿನಿಮಗಳೆಲ್ಲ ಸೂಪರ್ ಹಿಟ್. ಈಗ ಅವರ ‘ಜಂಬೂ ಸರ್ಕಸ್’ (Jamboo Circus) ಕೂಡ ಆ ನಿಟ್ಟಿನಲ್ಲಿ ಸಾಗುವಂತಿದೆ. ಅದಕ್ಕೆ ಸಾಕ್ಷಿಯಾಗಿ ಒಂದು ಇಂಪಾದ ಹಾಡು ‘ಮನಸೂತೆ ಮನಸಾರೆ.. ಕವಿರಾಜ್ ಅವರ ಗೀತ ಸಾಹಿತ್ಯದಲ್ಲಿ ನಕುಲ ಅಭಯಂಕರ ಹಾಡಿರುವ ಈ ಹಾಡನ್ನು ವಾಸುಕಿ ವೈಭವ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡುತ್ತಾ ಚಿತ್ರದ ಇನ್ನೆರಡು ಹಾಡು ‘ಗ್ರಹಚಾರ.. ಹಾಗೂ ಗಾಂಚಲಿ ಗಂಗವ್ವ.. ಸಹ ಮಾಧ್ಯಮದರ ಮುಂದೆ ಕಳೆದ ಶನಿವಾರ ಎಂ ಎಂ ಬಿ ಲೆಗಸಿ ಸಭಾಂಗಣದಲ್ಲಿ ಅನಾವರಣ ಮಾಡಲಾಯಿತು.

Jamboo Circus 3

‘ಜಂಬೂ ಸರ್ಕಸ್’ ಚಿತ್ರಕ್ಕೆ ಕಥಾ ಹಂದರ ಮೊದಲು ಬಂದಿದ್ದು ಹಾಸ್ಯ ನಟ ಸುಂದರ್ ವೀಣಾ ಅವರಿಂದ. ಅಲ್ಲಿಂದ ನಾವೆಲ್ಲ ಕುಳಿತು ಅದನ್ನು ಪಸಂದಾಗಿ ಮನರಂಜನೆ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಹಾಗೆ ಚಿತ್ರಕಥೆ ಸಿದ್ದ ಮಾಡಿದೆವು ಎಂದು ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಹೇಳಿಕೊಂಡರು. ಈ ಚಿತ್ರಕ್ಕೆ ಎಂ ಡಿ ಶ್ರೀಧರ್ ಅಂತಹ ನಿರ್ದೇಶಕರು ಇದ್ದ ಮೇಲೆ ಸಿನಿಮಾಕ್ಕೆ ಒಂದು ದೊಡ್ಡ ತೂಕ ಬಂದಿತು ಎಂದು ಅವರು ಮೆಚ್ಚುಗೆ ತಿಳಿಸಿದರು. ನಿರ್ಮಾಪಕ ಎಚ್ ಸಿ ಸುರೇಶ್ ಈ ಜಂಬೂ ಸರ್ಕಸ್ ಅನ್ನು ನಿಮ್ಮ ಸಿನಿಮಾ ಎಂದು ಪ್ರೋತ್ಸಾಹಿಸಿ ಎಂದು ಮಾಧ್ಯಮದರನ್ನು ಹಾರೈಸುವಂತೆ ವಿನಂತಿಸಿಕೊಂಡರು.

Jamboo Circus 1

ಖ್ಯಾತ ನಿರ್ದೇಶಕ ಎಂ ಡಿ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾದಲ್ಲೂ ಸಹ ನಾಯಕಿಯ ಹೆಸರನ್ನು ಅಂಕಿತ ಎಂದು ಮುಂದುವರೆಸಿದ್ದಾರೆ. ಅವರ ಮೊದಲ ಸಿನಿಮದಿಂದ ಸಹ ನಾಯಕಿಗೆ ಅಂಕಿತ ಎಂದೇ ಇರಬೇಕು ಎಂದು ಅವರ ಸಂಕಲ್ಪ ಯಾಕೆ ಮಾಡಿದ್ದಾರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಡಲಿಲ್ಲ. ವಾಸುಕಿ ವೈಭವ ಅವರ ಸುಶ್ರಾವ್ಯದ ಸಂಗೀತವನ್ನು ಕೊಂಡಾಡಿದ ನಿರ್ದೇಶಕ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಅಂದುಕೊಂಡಿದ್ದಾರೆ. ಅಂದಾಹಗೆ ನಿರ್ದೇಶಕ ಶ್ರೀಧರ್ ಅವರು ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಅವರ ವಸ್ತ್ರ ವಿನ್ಯಾಸದ ಪರಿಣಿತಿಯನ್ನು ಹೋಗಳಿ ಅವರನ್ನು ತಮ್ಮ ಮುಂದಿನ ಸಿನಿಮಗಳಲ್ಲಿ ಸಹ ಜೊತೆಯಾಗಿದ್ದರೆ ಅನುಕೂಲ ಆಗುವುದು ಎಂದು ತಿಳಿಸಿದರು. ನಾಯಕ ಪ್ರವೀಣ ತೇಜ್  ಹಾಗೂ ನಾಯಕಿ ಅಂಜಲಿ ಅವರಿಗೆ ಪ್ರತಿಭೆ ಹೇರಳವಾಗಿದೆ. ಅವರಿಬ್ಬರೂ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಕ್ಕೆ ಎರಲಿದ್ದಾರೆ ಎಂಬ ಭರವಸೆ ವ್ಯಕ್ತ ಮಾಡಿದರು ನಿರ್ದೇಶಕ ಎಂ ಡಿ ಶ್ರೀಧರ್.

 

ಟಾಮ್ ಅಂಡ್ ಜೆರ್ರಿ ರೀತಿಯಲ್ಲಿ ಜಂಬೂ ಸರ್ಕಸ್ ಚಿತ್ರದ ನಾಯಕ ಪ್ರವೀಣ ತೇಜ್ ಹಾಗೂ ನಾಯಕಿ ಅಂಜಲಿ ಎಸ್ ಅನೀಶ್ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರದ ಸಂಭಾಷಣೆಕಾರ ರಘು ನೀಡುವಲ್ಲಿ ವಿವರಿಸಿದರು. ಪೋಷಕ ನಟಿ ಲಕ್ಷ್ಮಿ ಸಿದ್ದಯ್ಯ ಜಗಳಗಂಟಿಯ ಪಾತ್ರ ಮಾಡಿದ್ದೆ ಅಲ್ಲದೆ ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಸಮಾಧಾನ ಹಾಗೂ ಸಂತೋಷ ತಂದಿದೆ ಎಂದು ವಿವರಿಸಿದರು. ನಾಯಕ ಪ್ರವೀಣ ತೇಜ್ ಮಾತನಾಡುತ್ತಾ ನಾನು ಇಂದು ಚಿತ್ರ ರಂಗದಲ್ಲಿ ಇರೋದಕ್ಕೆ ನಿರ್ದೇಶಕ ಎಂ ಡಿ ಶ್ರೀಧರ್ ಕಾರಣ. ಅವರ ನಿರ್ದೇಶನದ ಸಿನಿಮಾ ಎಂದು ನಿರ್ಮಾಪಕ ಸುರೇಶ್ ಹೇಳಿದಾಗ ನಾನು ಕುಣಿದು ಕುಪ್ಪಳಿಸಿದೆ. ಅದಕ್ಕೆ ತಕ್ಕಂತೆ ಅವರು ನನಗೆ ವಿಭಿನ್ನವಾದ ಪಾತ್ರ ನಿರ್ವಹಣೆ ಸಹ ನೀಡಿ ಸಂತೋಷ ಇನ್ನೂ ಹೆಚ್ಚು ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕಿ ಅಂಜಲಿ ನನಗಿಂತ ಚನ್ನಾಗಿ ನೃತ್ಯ ಮಾಡಿದ್ದಾರೆ ಎಂಬ ವಿಚಾರವನ್ನು ನಾಯಕ ಪ್ರವೀಣ ತೇಜ್ ಹೇಳಿಕೊಂಡರು.

 

ಒಳ್ಳೆ ಪಾತ್ರಗಳು ಕಷ್ಟ ಸಿಗುವುದು. ಅದು ನನ್ನ ಪಾಲಾಗಿದೆ ಈ ಚಿತ್ರದಲ್ಲಿ. ಇದಕ್ಕೆ ಎಲ್ಲರ ಪ್ರೋತ್ಸಾಹ ಬೇಕು ಎಂದು ಮನವಿ ಮಾಡಿಕೊಂಡರು ನಾಯಕಿ ಅಂಜಲಿ ಎಸ್ ಅನೀಶ್. ಖ್ಯಾತ ಛಾಯಾಗ್ರಾಹಕ ಎ ವಿ ಕೃಷ್ಣಕುಮಾರ್ ಹಲವು ಬಾರಿ ಭವಿಷ್ಯ ನುಡಿದದ್ದು ನಿಜವಾಗಿದೆ. ಜಂಬೂ ಸರ್ಕಸ್ ಇಂದ ನಾಯಕಿ ಅಂಜಲಿ ಹಾಗೂ ನಾಯಕ ಪ್ರವೀಣ್ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು. ಶ್ರೀ ಮಹತಿ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಜಂಬೂ ಸರ್ಕಸ್ ನಿರ್ಮಾಪಕರು ಎಚ್ ಸಿ ಸುರೇಶ್. ಸಾಹಸವನ್ನು ಡಾ ರವಿ ವರ್ಮಾ ನೀಡಿದ್ದಾರೆ, ಎ ಹರ್ಷ ಮೂರು ಹಾಡುಗಳಿಗೆ ನೃತ್ಯ ನಿರ್ದೇಶನ ಒದಗಿಸಿದ್ದಾರೆ. ಜಯಂತ್ ಕಾಯಕಿಣಿ, ಡಾ ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಗೀತ ಸಾಹಿತ್ಯವಿದೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಜ್ಞಾನೇಶ ಸಂಕಲನ ಓದಗಿಸಿದ್ದಾರೆ. ಜಂಬೂ ಸರ್ಕಸ್ ಪೋಷಕ ಕಾಲವಿದರಾಗಿ ಅವಿನಾಶ್, ಅಚ್ಯುತ ಕುಮಾರ್, ರವಿಶಂಕರ್ ಗೌಡ, ಆಶಾಲತ, ಲಕ್ಷ್ಮಿ ಸಿದ್ದಯ್ಯ, ನಯನ ಶರತ್, ಜಗಗಪ್ಪ ಹಾಗೂ ದಿವಂಗತ ಮೋಹನ್ ಜುನೇಜ ಇದ್ದಾರೆ.

TAGGED:Jamboo CircusMD ShridharSangಎಂ.ಡಿ. ಶ್ರೀಧರ್ಜಂಬೂ ಸರ್ಕಸ್ಸಾಂಗ್
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

Fire breaks out at bike garage more than 8 bikes burnt Ilkal Bagalkote
Bagalkot

ಬೈಕ್ ಗ್ಯಾರೇಜ್‌ಗೆ ಬೆಂಕಿ- 8ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮ

Public TV
By Public TV
4 minutes ago
IMRAN KHAN
Cricket

ಕಪಿಲ್, ಸುನಿಲ್ ಗವಾಸ್ಕರ್ ಸೇರಿ 14 ಕ್ರಿಕೆಟ್ ದಿಗ್ಗಜರಿಂದ ಪಾಕ್‌ಗೆ ಪತ್ರ – ಇಮ್ರಾನ್‌ಗೆ ವೈದ್ಯಕೀಯ ಸೇವೆ ನೀಡುವಂತೆ ಮನವಿ

Public TV
By Public TV
59 minutes ago
IAF Rafale main
Bengaluru City

ಭಾರತದಲ್ಲೇ ತಯಾರಾಗಲಿದೆ ರಫೇಲ್‌ ಹ್ಯಾಮರ್‌ – ಈ ಕ್ಷಿಪಣಿಯ ವಿಶೇಷತೆ ಏನು?

Public TV
By Public TV
1 hour ago
Yadagiri Bus Accident
Crime

ಶಾಲಾ ಬಸ್ಸಿನಿಂದ ಇಳಿಸಿ ರಿವರ್ಸ್ ತೆಗೆಯುವಾಗ ಹರಿದ ಬಸ್ – ಬಾಲಕ ಸಾವು

Public TV
By Public TV
1 hour ago
Karnataka Congress MLAs ‘foreign study tour Here is the list of MLAs going abroad
Bengaluru City

ಕುರ್ಚಿ ಕದನ ಹೊತ್ತಲ್ಲೇ ಟೂರ್ ಪಾಲಿಟಿಕ್ಸ್ – ವಿದೇಶಕ್ಕೆ ಯಾರ್‍ಯಾರು ಹೋಗ್ತಿದ್ದಾರೆ?

Public TV
By Public TV
2 hours ago
PM Narendra Modis car diplomacy on display again as he rides with France President Macron in Mumbai
Latest

Car Diplomacy| ಮ್ಯಾಕ್ರನ್‌ ಜೊತೆ ಕಾರಿನಲ್ಲಿ ಮೋದಿ ಮಾತುಕತೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?