ಜಮಾಲಿ ಗುಡ್ಡ ಚಿತ್ರದ ಟ್ರೇಲರ್ ರಿಲೀಸ್ : ಡಿಸೆಂಬರ್ 30ರಂದು ತೆರೆಗೆ

Public TV
2 Min Read
FotoJet 1 55

ಟ ರಾಕ್ಷಸ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ  “once upon  a time in ಜಮಾಲಿಗುಡ್ಡ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ಈ ಚಿತ್ರ ಒಂದು ಕಾಲ್ಪನಿಕ ಪ್ರಪಂಚ. ಜೊತೆಗೆ ಭಾವನಾತ್ಮಕ ಪಯಣ ಕೂಡ. ಧನಂಜಯ ಹಾಗೂ ಬೇಬಿ‌ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿಬಂದಿದೆ. 95 – 96 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಚಿಕ್ಕಮಗಳೂರಿನ ಬಾಬಾಬುಡನಗಿರಿಯ ಸೊಬಗು ಚಿತ್ರದ ಮತ್ತೊಂದು ಹೈಲೈಟ್. ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. “ಜಮಾಲಿ ಗುಡ್ಡ” ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕರು ಹಾಗೂ ಇಡೀ ಚಿತ್ರತಂಡದ ಸಹಕಾರ ಕಾರಣ ಎಂದರು ನಿರ್ದೇಶಕ ಕುಶಾಲ್ ಗೌಡ.

FotoJet 64

“ಜಮಾಲಿಗುಡ್ಡ” ಈ ವರ್ಷದ ನನ್ನ ನಟನೆಯ 6 ನೇ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಇದೊಂದು ಫೀಲ್ ಗುಡ್ ಸಿನಿಮಾ.‌ ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಚಿತ್ರ. ಕುಶಾಲ್ ಗೌಡ ಅವರು ಈ ಚಿತ್ರಕ್ಕಾಗಿ ಫೇಸ್ ಬುಕ್ ಮೂಲಕ ನಿರ್ಮಾಪಕರನ್ನು ಹುಡುಕಿದರು. ಆಗ ಶ್ರೀಹರಿ ಸಿಕ್ಕರು. ನಾನು‌ ಕೂಡ ಬ್ಯುಸಿ ಇದ್ದೆ. ಆದರೆ, ಹೆಚ್ಚಿನ ಚಿತ್ರೀಕರಣ ಬಾಬಾಬುಡನಗಿರಿಯಲ್ಲೇ ನಡೆಯಬೇಕಿತ್ತು. ಅದರಲ್ಲೂ  ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವಾತಾವರಣದಲ್ಲೇ ಚಿತ್ರೀಕರಣ ನಡೆಯಬೇಕಾಗಿದ್ದರಿಂದ ಬೇಗ ಈ ಚಿತ್ರೀಕರಣದಲ್ಲಿ ಪಾಲ್ಗೊಂಡೆ.   ಛಾಯಾಗ್ರಾಹಕ ಕಾರ್ತಿಕ್ ಸೇರಿದಂತೆ ಇಡೀ ತಂತ್ರಜ್ಞರ ಕಾರ್ಯವೈಖರಿ ಹಾಗೂ ಅದಿತಿ ಪ್ರಭುದೇವ ಅವರ ಆದಿಯಾಗಿ ಎಲ್ಲಾ ಕಲಾವಿದರ ಅಭಿನಯ  ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ. ನಿರ್ಮಾಪಕರು ಮತ್ತಷ್ಟು ಚಿತ್ರ ನಿರ್ಮಾಣ ಮಾಡಲಿ ಎಂದರು ನಾಯಕ ಡಾಲಿ ಧನಂಜಯ.

FotoJet 3 41

ಈ ಚಿತ್ರ ನನ್ನ ವೃತ್ತಿ ಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಾಗಲಿದೆ. ಈ ಚಿತ್ರದ ಭಾವನಾತ್ಮಕ ಸನ್ನಿವೇಶಗಳಲ್ಲಿ ನಾನು ಎಷ್ಟೋ ಕಡೆ ಸಹಜವಾಗಿ ಅತ್ತಿದ್ದು ಇದೆ. ಅಂತಹ ಅದ್ಭುತ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಧನಂಜಯ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರದ ಮೇಲಿರಲಿ ಎಂದರು ನಟಿ ಅದಿತಿ ಪ್ರಭುದೇವ. ಇದನ್ನೂ ಓದಿ: ದೀಪಿಕಾ ಅಸಭ್ಯ ನೃತ್ಯ ಸಿನಿಮಾ ನೋಡದಂತೆ ಮಾಡಿದೆ – `ಪಠಾಣ್’ ಹೆಸರು ಬಳಕೆಗೆ ಮುಸ್ಲಿಂ ಧರ್ಮಗುರು ಆಕ್ಷೇಪ

FotoJet 2 53

ನಾನು ಮೂಲತಃ ಚಿತ್ರೋದ್ಯಮಿ ಅಲ್ಲ. ನಮ್ಮದೇ ಬೇರೆ ಉದ್ಯಮ ಇದೆ. ಆದರೆ ನನಗೆ ಇಪ್ಪತ್ತು ವರ್ಷಗಳ ಹಿಂದೆ ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು. ಅದು ಆಗಲಿಲ್ಲ. ಈಗ ನಿರ್ಮಾಪಕನಾಗಿದ್ದೇನೆ. ಡಿಸೆಂಬರ್ 30ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ಶ್ರೀಹರಿ. ಚಿತ್ರದಲ್ಲಿ ನಟಿಸಿರುವ ಯಶ್ ಶೆಟ್ಟಿ, ರುಶಿಕಾ, ದಿವ್ಯ, ಪ್ರಾಣ್ಯ, ಸಂತು, ಸಂಕಲನಕಾರ ಹರೀಶ್ ಕೊಮ್ಮೆ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ಕಾರ್ತಿಕ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *