– ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಹಲವು ಸಾಧನೆ ʻಯಶಸ್ವಿʼ
ರಾಂಚಿ: ಕ್ರಿಕೆಟ್ಲೋಕದಲ್ಲೀಗ ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರದ್ದೇ ಸುದ್ದಿ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚುತ್ತಿರುವ ಜೈಸ್ವಾಲ್ ಸದ್ಯದಲ್ಲೇ ವಿರಾಟ್ ಕೊಹ್ಲಿ (Virat Kohli) ಅವರ ಅಪರೂಪದ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ.
Advertisement
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ಗಳಿಸಿದ ಟೀಂ ಇಂಡಿಯಾ (Team India) 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸನಿಹದಲ್ಲಿ ಜೈಸ್ವಾಲ್. ಟೆಸ್ಟ್ ಕ್ರಿಕೆಟ್ನ ಸರಣಿಯೊಂದರಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ಗಳ ಪೈಕಿ 774 ರನ್ ಗಳಿಸಿರುವ ಸುನೀಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ 3 ಪಂದ್ಯಗಳಲ್ಲಿ 545 ರನ್ ಗಳಿಸಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ಗೆ ಕೊಹ್ಲಿ ದಾಖಲೆ ಮುರಿಯಲು ಇನ್ನೂ 147 ರನ್ಗಳ ಅಗತ್ಯವಿದೆ. ಇದನ್ನೂ ಓದಿ: ಫೋಟೋ ಶೂಟ್ನಲ್ಲಿ ಮಿಂಚಿದ RCB ಸ್ಟಾರ್ಸ್ – ʻಈ ಸಲ ಕಪ್ ನಮ್ದೇʼ ಮತ್ತೆ ಶುರುವಾಯ್ತು ಟ್ರೆಂಡ್!
Advertisement
Advertisement
ಸದ್ಯ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಆಡಿರುವ 3 ಪಂದ್ಯಗಳಲ್ಲಿ (6 ಇನ್ನಿಂಗ್ಸ್) 109 ಸರಾಸರಿಯಲ್ಲಿ ಒಟ್ಟು 545 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ದ್ವಿಶತಕ, 1 ಅರ್ಧಶತಕ, 50 ಬೌಂಡರಿ, 22 ಸಿಕ್ಸರ್ಗಳೂ ಸೇರಿವೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯಕ್ಕೆ ಕೆ.ಎಲ್ ರಾಹುಲ್ ಕಂಬ್ಯಾಕ್ – ಸುಳಿವು ಕೊಟ್ಟ ರೋಹಿತ್
Advertisement
2023-25ರ WTCನಲ್ಲಿ ಯಶಸ್ವಿ ಸಾಧನೆ:
ಬ್ಯಾಟಿಂಗ್ನಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಸದ್ಯ 2023-25ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಲ್ಲಿ ಟಾಪ್ನಲ್ಲಿದ್ದಾರೆ. ಅತಿಹೆಚ್ಚು ಸ್ಕೋರರ್, ಉತ್ತಮ ಸರಾಸರಿ, ಅತಿಹೆಚ್ಚು ರನ್, ಅತಿಹೆಚ್ಚು ಸ್ಟ್ರೈಕ್ರೇಟ್, ಹೆಚ್ಚು ಬಾರಿ 50+ ರನ್ ಗಳಿಸಿದವರು, ಹೆಚ್ಚು ಬಾರಿ ಶತಕ ಸಿಡಿಸಿದವರು, ಹೆಚ್ಚು ಬೌಂಡರಿ, ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್ ಅಗ್ರಸ್ಥಾನದಲ್ಲಿರುವುದು ವಿಶೇಷ.
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್-5 ಲಿಸ್ಟ್
* ಡಾನ್ ಬ್ರಾಡ್ಮನ್ – 974 ರನ್ (5 ಪಂದ್ಯ, 7 ಇನ್ನಿಂಗ್ಸ್)
* ವಾಲಿ ಹ್ಯಾಮಂಡ್ – 905 ರನ್ (5 ಪಂದ್ಯ, 9 ಇನ್ನಿಂಗ್ಸ್)
* ರಾಸ್ ಟೇಲರ್ – 839 ರನ್ (6 ಪಂದ್ಯ, 11 ಇನ್ನಿಂಗ್ಸ್)
* ನೀಲ್ ಹಾರ್ವೆ – 834 ರನ್ (5 ಪಂದ್ಯ, 9 ಇನ್ನಿಂಗ್ಸ್)
* ವಿವ್ ರಿಚರ್ಡ್ಸ್ – 829 (4 ಪಂದ್ಯ, 7 ಇನ್ನಿಂಗ್ಸ್)
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯರು
* ಸುನೀಲ್ ಗವಾಸ್ಕರ್ – 774 (4 ಪಂದ್ಯ, 8 ಇನ್ನಿಂಗ್ಸ್) – 1970-71 ರಲ್ಲಿ
* ಸುನೀಲ್ ಗವಾಸ್ಕರ್ – 732 (6 ಪಂದ್ಯ, 9 ಇನ್ನಿಂಗ್ಸ್) – 1978/79 ರಲ್ಲಿ
* ವಿರಾಟ್ ಕೊಹ್ಲಿ – 692 – (4 ಪಂದ್ಯ, 8 ಇನ್ನಿಂಗ್ಸ್) – 2014/15 ರಲ್ಲಿ