ನವದೆಹಲಿ: ಪಾಕಿಸ್ತಾನದ ಕುಖ್ಯಾತ ಜೈಶ್-ಇ-ಮೊಹಮದ್ ಉಗ್ರ ಸಂಘಟನೆಯು ಭಾರತೀಯ ಸೇನೆಯ ವಿನಾಶಕಾರಿ ಸಮರನೌಕೆಗಳ ಮೇಲೆ ಕಣ್ಣಿಟ್ಟಿದ್ದು, ಅವುಗಳನ್ನು ಧ್ವಂಸ ಮಾಡಲು ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ ನೀಡುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ.
ಭಾರತವನ್ನು ಗುರಿ ಮಾಡಿಕೊಂಡಿರುವ ಜೈಶ್-ಇ-ಮೊಹಮದ್ ಉಗ್ರ ಸಂಘಟನೆಯು ಪಾಕಿಸ್ತಾನ ಹಾಗೂ ಬಹವಲ್ಪುರ ಸಮುದ್ರ ಪ್ರದೇಶದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದ್ದು, ಭಾರತೀಯ ಸೇನೆಯ ಅತ್ಯಂತ ಬಲಶಾಲಿ ಮತ್ತು ವಿನಾಶಕಾರಿ ಯುದ್ಧ ನೌಕೆಗಳನ್ನು ಧ್ವಂಸ ಮಾಡಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಸಮುದ್ರದ ಅತ್ಯಂತ ಆಳಕ್ಕೆ ಧುಮುಕಿ ಅಲ್ಲಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಕುರಿತು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
Advertisement
Advertisement
ವರದಿಗಳ ಪ್ರಕಾರ ಉಗ್ರರು ಪ್ರಮುಖವಾಗಿ ಭಾರತದ ಪರಮಾಣ ಜಲಾಂತರ್ಗಾಮಿ ನೌಕೆಗಳು, ಯುದ್ಧ ವಿಮಾನಗಳನ್ನು ಸಾಗಿಸುವ ನೌಕೆಗಳು ಮತ್ತು ಯುದ್ಧ ನೌಕೆಗಳನ್ನು ಗುರಿ ಮಾಡಿದ್ದಾರೆ. ಅಲ್ಲದೇ ಭಾರತದ ಪ್ರಮುಖ ಪರಮಾಣು ಜಲಾಂತರ್ಗಾಮಿಗಳಾದ ಐಎನ್‍ಎಸ್ ಅರಿಹಂತ್ ಮತ್ತು ಐಎನ್‍ಎಸ್ ಅರಿಘಾಟ್ ಉಗ್ರರ ಪ್ರಮುಖ ಗುರಿಯಾಗಿದೆ ಎಂದು ತಿಳಿದು ಬಂದಿದೆ. ವಿಶಾಖಪಟ್ಟಣದಲ್ಲಿ ಲಂಗರು ಹಾಕಿರುವ ಐಎನ್‍ಎಸ್ ಚಕ್ರ ಮೇಲೂ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
Advertisement
ಗುಪ್ತಚರ ಮಾಹಿತಿಯ ವರದಿ ಬೆನ್ನಲ್ಲೇ ಎಚ್ಚೆತ್ತ ಭಾರತ ನೌಕಾದಳವು ಸಮುದ್ರದಲ್ಲಿ ಅತೀ ಸೂಕ್ಷ್ಮ ರಾಡಾರ್ ಗಳನ್ನು ಸ್ಥಾಪಿಸಿದೆ. ಈ ರಾಡಾರ್ ಗಳು ಸಮುದ್ರದ ಆಳದಲ್ಲಿ ಯಾವುದೇ ವಸ್ತುಗಳ ಬಗ್ಗೆ ಮಾಹಿತಿ ರವಾನಿಸುತ್ತವೆ.
Advertisement
ಈ ಹಿಂದೆ 2000 ನೇ ವರ್ಷದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯು ಇದೇ ರೀತಿ ಸಂಚು ರೂಪಿಸಿ ಅಮೆರಿಕದ ಜಲಾಂತರ್ಗಾಮಿಯನ್ನು ಹೊಡೆದುರುಳಿಸಿತ್ತು. ಅಮೆರಿಕದ ವಿನಾಶಕಾರಿ ಜಲಾಂತರ್ಗಾಮಿ ಯುಎಸ್ ಎಸ್ ಯೆಮೆನ ಅಡೆನ್ ಬಂದರಿನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದಾಗ ಅಲ್ ಖೈದಾ ಉಗ್ರರು ಸಮುದ್ರಕ್ಕೆ ಧುಮಿಕಿ ಸ್ಫೋಟಕಗಳಿಂದ ದಾಳಿ ಮಾಡಿ ಜಲಾಂತರ್ಗಾಮಿಯನ್ನು ಧ್ವಂಸ ಮಾಡಿದ್ದರು. ಈ ದುರಂತದಲ್ಲಿ 17 ಮಂದಿ ಅಮೆರಿಕದ ನೌಕಾಪಡೆಯ ಸೈನಿಕರು ಹುತಾತ್ಮರಾಗಿದ್ದರು.