– ಪಾಕಿನಲ್ಲಿ 20 ಸಾವಿರ ರೂ. ದೇಣಿಗೆ ಸಂಗ್ರಹ
ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದ ಬಳಿಕ ಇದೀಗ ಭಾರತದ ವಿರುದ್ಧ ಜೈಶ್-ಎ-ಮೊಹಮ್ಮದ್‌ನ (Jaish-e-Mohammed) ಮಹಿಳಾ ಸಂಘಟನೆ ಫಿದಾಯೀನ್ ದಾಳಿಗೆ ಸಿದ್ಧವಾಗುತ್ತಿದೆ ಹಾಗೂ ಅದಕ್ಕಾಗಿ ದೇಣಿಕೆ ಹಣವನ್ನು ಸಂಗ್ರಹಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ದೆಹಲಿಯ ಕೆಂಪುಕೋಟೆ (Redfort Blast) ಸ್ಫೋಟದ ತನಿಖೆಯ ಸಂದರ್ಭದಲ್ಲಿ ಪತ್ತೆಯಾದ ಮಾಹಿತಿಗಳ ಪ್ರಕಾರ, ಪಾಕಿಸ್ತಾನ ಮೂಲದ ಜೈಶ್ ಸಂಘಟನೆಯು ದಾಪೇ ಎಂಬ ಪಾಕ್ ಅಪ್ಲಿಕೇಶನ್ ಸೇರಿದಂತೆ ಇನ್ನಿತರ ಡಿಜಿಟಲ್ ವಿಧಾನಗಳ ಮೂಲಕ ನಿಧಿಸಂಗ್ರಹಣೆ ಮಾಡುತ್ತಿದೆ. `ಆಪರೇಷನ್ ಸಿಂಧೂರ’ಕ್ಕೆ ಪ್ರತೀಕಾರವಾಗಿ ಜೈಶ್ ಸಂಘಟನೆಯು ಮಹಿಳೆಯರ ನೇತೃತ್ವದಲ್ಲಿ ದಾಳಿಗೆ ಸಂಚು ರೂಪಿಸುತ್ತಿದೆ ಎಂದು ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: ದೆಹಲಿ ಸ್ಫೋಟಕ್ಕೂ ಮುನ್ನ ಪುಲ್ವಾಮಾಗೆ ಭೇಟಿ ಕೊಟ್ಟಿದ್ದ ಬಾಂಬರ್ ಉಮರ್
ಈಗಾಗಲೇ ಜೈಶ್ ಸಂಘಟನೆಯು ಮಹಿಳಾ ಘಟಕವನ್ನು ಹೊಂದಿದೆ. ಜೈಶ್‌ನ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರಿ ಸಾದಿಯಾ ನೇತೃತ್ವದಲ್ಲಿ ಮಹಿಳಾ ಘಟಕ ಮುನ್ನಡೆಯುತ್ತಿದೆ. ಕೋಟೆ ಸ್ಫೋಟದ ಪ್ರಮುಖ ಶಂಕಿತರಲ್ಲಿ ಒಬ್ಬಳಾದ ಡಾ. ಶಾಹಿನಾ ಸಯೀದ್ ಕೂಡ ಮಹಿಳಾ ಘಟಕದ ಸದಸ್ಯಳಾಗಿದ್ದಳು. ಅಲ್ಲದೇ `ಮೇಡಂ ಸರ್ಜನ್’ ಎಂಬ ಹೆಸರನ್ನು ಹೊಂದಿದ್ದಳು ಎಂದು ತಿಳಿದುಬಂದಿದೆ.
ದಾಳಿಗೂ ಮುನ್ನ ಹಾಗೂ ದಾಳಿ ಬಳಿಕ ಭಯೋತ್ಪಾದಕರಿಗೆ ಬೇಕಾಗುವ ಶೂ, ಸಾಕ್ಸ್, ಹಾಸಿಗೆ ಹಾಗೂ ಟೆಂಟ್‌ಗಳನ್ನು ಖರೀದಿಸಲು ತಲಾ 20,000 ಪಾಕಿಸ್ತಾನಿ ರೂಪಾಯಿ ಅಥವಾ 6,400 ಭಾರತದ ರೂಪಾಯಿ ದೇಣಿಗೆ ಸಂಗ್ರಹಿಸಲು ಸಂಘಟನೆ ಮುಂದಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.ಇದನ್ನೂ ಓದಿ: ದೆಹಲಿ ಕಾರು ಸ್ಫೋಟ ಸ್ಥಳದಲ್ಲಿ 68 ಅನುಮಾನಾಸ್ಪದ ಮೊಬೈಲ್ ಫೋನ್ ಸಕ್ರಿಯ – ಪಾಕ್, ಟರ್ಕಿಯಿಂದ ಕರೆ

