ಜೈಪುರ: ಜೈಪುರದ (Jaipur) ಪಿಂಕ್ ಆನೆ (Pink Elephant) ಹೃದಯಾಘಾತದಿಂದ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ವೇಳೆ ಹೃದಯಾಘಾತವಾಗಿರುವುದು ದೃಢಪಟ್ಟಿದೆ.
ಆನೆ ಸಫಾರಿ ಬ್ಯಾನ್ ಮಾಡುವಂತೆ ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಫೋಟೋ ಶೂಟ್‌ಗಾಗಿ ಆನೆಗೆ ಪಿಂಕ್ ಬಣ್ಣ ಬಳಿದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಗಂಡು ಮಗು ಆಗ್ಲಿಲ್ಲ ಅಂತ ಗರ್ಭಿಣಿ ಪತ್ನಿ, ಇಬ್ಬರು ಹೆಣ್ಣುಮಕ್ಕಳ ಹತ್ಯೆಗೈದ ಪಾಪಿ
ನಟಿ ಮತ್ತು ಪ್ರಾಣಿ ಪ್ರೇಮಿ ರೂಪಾಲಿ ಗಂಗೂಲಿ, ಆನೆ ಸವಾರಿಯನ್ನು ನಿಷೇಧಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಾಣಿ ಪ್ರಿಯರು ಚಿತ್ರೀಕರಣವನ್ನು ಕ್ರೂರ ಎಂದು ಕರೆದಿದ್ದಾರೆ. ಆನೆಯ ಮಾಲೀಕರು, ಛಾಯಾಗ್ರಾಹಕ ಮತ್ತು ಅರಣ್ಯ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.
ಚಿತ್ರೀಕರಣದಲ್ಲಿದ್ದ ಚಂಚಲ್ ಎಂಬ ಹೆಣ್ಣು ಆನೆ ಫೆಬ್ರವರಿಯಲ್ಲಿ ಸಾವನ್ನಪ್ಪಿತು. ಸಾವಿನ ಸುದ್ದಿ ಆಕ್ರೋಶಕ್ಕೆ ಕಾರಣವಾಗಿದ್ದು, ಆನೆ ಸಾವಿಗೆ ಫೋಟೋಶೂಟ್ ಕಾರಣ ಎಂದು ಪ್ರಾಣಿ ಪ್ರಿಯರು ದೂಷಿಸಿದ್ದಾರೆ. ಆನೆ ಗ್ರಾಮ ಸಮಿತಿಯ ಅಧ್ಯಕ್ಷ ಬಲ್ಲು ಖಾನ್ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ಚಿತ್ರೀಕರಣವು ಸುಮಾರು ಒಂದು ವರ್ಷದ ಹಿಂದೆ ನಡೆದಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚಂಚಲ್ ಆನೆಗೆ ಸುಮಾರು 65-70 ವರ್ಷ ವಯಸ್ಸಾಗಿತ್ತು. ಹೋಳಿ ಆಚರಣೆಯಲ್ಲಿ ಬಳಸುವ ಗುಲಾಲ್ ಪುಡಿಯಿಂದ ಆನೆಗೆ ಬಣ್ಣ ಬಳಿಯಲಾಗಿತ್ತು. ಸುಮಾರು ಅರ್ಧ ಗಂಟೆಯ ನಂತರ ಬಣ್ಣವನ್ನು ತೊಳೆಯಲಾಗುತ್ತಿತ್ತು. ಇದನ್ನೂ ಓದಿ: ದಿವಾಳಿ ಪಾಕ್‌ನಿಂದ ಮತ್ತೆ ಶಾಕ್ – ಎಮ್ಮೆ ಸಾಕಿದವರಿಗೆ ಸೆಗಣಿ ತೆರಿಗೆ
ಚಂಚಲ್ ಆನೆಯು 2026ರ ಫೆಬ್ರವರಿ 4 ರಂದು ಮಧ್ಯಾಹ್ನ 3:30 ಕ್ಕೆ ಸಾವನ್ನಪ್ಪಿದೆ. ಅದಕ್ಕೆ 67 ವರ್ಷ ವಯಸ್ಸು. ವೃದ್ಧಾಪ್ಯದ ಕಾರಣದಿಂದಾಗಿ ಸಹಜ ಹೃದಯ ಸ್ತಂಭನದಿಂದ ಅದು ಸಾವಿಗೀಡಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡದಲ್ಲಿದ್ದ ಡಾ. ಅರವಿಂದ್ ಮಾಥುರ್, ಆನೆಗೆ 67 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಉಸಿರಾಟದ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ದೃಢಪಡಿಸಿದೆ. ಅದರ ಸಾವು ಸಂಪೂರ್ಣವಾಗಿ ಸ್ವಾಭಾವಿಕವಾಗಿದ್ದು, ಗುಲಾಲ್ ಚಿತ್ರಕಲೆ ಘಟನೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

