ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನ ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು 1 ತಿಂಗಳಿನಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.
ರಾಜಸ್ಥಾನದ ಜೈಪುರ ಮೂಲದವರಾದ ಓಂ ಶಾಂತಿ ಶರ್ಮಾ ಸೆಪ್ಟೆಂಬರ್ 8 ರಿಂದ ಧರಣಿ ಕುಳಿತಿದ್ದಾರೆ. ತನ್ನ ಮಾನಸಿಕ ಸ್ಥಿತಿ ಚೆನ್ನಾಗೇ ಇದೆ ಎಂದು ಕೂಡ ಆಕೆ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿಗೆ ಸೇವೆ ಸಲ್ಲಿಸಬೇಕು. ಅವರು ಒಂಟಿಯಾಗಿದ್ದಾರೆ ಹಾಗೂ ಅವರಿಗೆ ಮಾಡಲು ತುಂಬಾ ಕೆಲಸಗಳಿವೆ ಎಂದು ಆಕೆ ಹೇಳಿದ್ದಾರೆ.
Advertisement
ನನಗೆ ಈ ಮುಂಚೆ ಮದುವೆಯಾಗಿತ್ತು. ಆದ್ರೆ ಆ ಸಂಬಂಧ ತುಂಬಾ ಕಾಲ ಉಳಿಯಲಿಲ್ಲ. ಕಳೆದ ಹಲವು ವರ್ಷಗಳಿಂದ ನಾನು ಒಂಟಿಯಾಗಿದ್ದೇನೆ. ಸಾಕಷ್ಟು ಮದುವೆ ಪ್ರಸ್ತಾಪಗಳನ್ನ ನಿರಾಕರಿಸಿದ್ದೇನೆ. ಈಗ ನರೇಂದ್ರ ಮೋದಿಯವರನ್ನ ಮದುವೆಯಾಗಲು ಇಲ್ಲಿದ್ದೇನೆ ಅಂತ ಶಾಂತಿ ಶರ್ಮಾ ಜಂತರ್ ಮಂತರ್ ಬಳಿ ಧರಣಿಯ ವೇಳೆ ಹೇಳಿದ್ದಾರೆ.
Advertisement
ಪ್ರಧಾನಿಯನ್ನ ಯಾಕೆ ಮದುವೆಯಾಗ್ಬೇಕು? ಎಂದು ಪ್ರಶ್ನಿಸಿದ್ದಕ್ಕೆ, ಅವರನ್ನು ಭೇಟಿಯಾಗಲು ಬಿಡುವುದಿಲ್ಲ ಎಂದು ನನಗೆ ಗೊತ್ತು. ಆದ್ರೆ ಅವರಿಗೆ ಸಹಾಯ ಬೇಕು ಎಂಬುದು ಕೂಡ ಗೊತ್ತು. ಅವರೂ ನನ್ನಂತೆ ಒಂಟಿಯಾಗಿದ್ದಾರೆ ಅಂದ್ರು.
Advertisement
ಇದನ್ನ ಕೇಳಿದ್ರೆ ಜನ ನನ್ನ ನೋಡಿ ನಗ್ತಾರೆ. ಅವರಿಗೆ ನಾನು ಹೇಳಬಯಸುವುದೇನಂದ್ರೆ ನನಗೆ ಮೋದಿ ಅವರ ಮೇಲೆ ಮೋಹವಿದೆ ಎಂಬ ಕಾರಣಕ್ಕೆ ಮದುವೆ ಆಗಲು ಬಯಸುತ್ತಿಲ್ಲ. ನಾನು ಅವರನ್ನ ಗೌರವಿಸುತ್ತೇನೆ ಕೂಡ. ನಮ್ಮ ಸಂಸ್ಕøತಿಯಲ್ಲಿ ಚಿಕ್ಕಂದಿನಿಂದಲೂ ಹಿರಿಯರನ್ನ ಗೌರವಿದುವುದನ್ನ, ಅವರ ಕೆಲಸದಲ್ಲಿ ಸಹಾಯ ಮಾಡಬೇಕೆಂಬುದನ್ನ ಹೇಳಿಕೊಟ್ಟಿದ್ದಾರೆ. ನನ್ನ ಕೈಲಾದಷ್ಟು ಮಾಡಿ ಅವರಿಗೆ ಸಹಾಯ ಮಾಡಬೇಕು ಅಂತ ಶಾಂತಿ ಹೇಳಿದ್ದಾರೆ.
Advertisement
ಶಾಂತಿ ಶ್ರೀಮಂತೆಯಂತೆ: ಶಾಂತಿ ಅವರಿಗೆ ತನ್ನ ಮೊದಲ ಮದುವೆಯಿಂದ ಈಗಾಗಲೇ 20 ವರ್ಷದ ಮಗಳಿದ್ದಾರೆ. ಆದ್ರೆ ಆಕೆಯ ಭವಿಷ್ಯದ ಬಗ್ಗೆ ಚಿಂತೆಯಿಲ್ಲ. ನನ್ನ ಬಳಿ ಸಾಕಷ್ಟು ಭೂಮಿ ಹಾಗೂ ಹಣ ಇದೆ ಎಂದಿದ್ದಾರೆ. ನನಗೆ ಜೈಪುರದಲ್ಲಿ ಸಾಕಷ್ಟು ಭೂಮಿ ಇದೆ. ಅದರಲ್ಲಿ ಸ್ವಲ್ಪ ಮಾರಾಟ ಮಾಡಿ ಮೋದಿ ಅವರಿಗೆ ಉಡುಗೊರೆ ಕೊಳ್ಳಬೇಕೆಂದಿದ್ದೇನೆ. ಮೋದಿ ಅವರು ಬಂದು ನನ್ನನ್ನು ಭೇಟಿಯಾಗೋವರೆಗೆ ಧರಣಿ ಮುಂದುವರೆಸುತ್ತೇನೆ ಅಂತ ಶಾಂತಿ ಹೇಳಿದ್ದಾರೆ.
ಶಾಂತಿ ಶರ್ಮಾ ಜಂತರ್ ಮಂತರ್‍ನಲ್ಲಿನ ಸಾರ್ವಜನಿಕ ಶೌಚಾಲಯವನ್ನ ಬಳಸುತ್ತಿದ್ದಾರೆ. ಗುರುದ್ವಾರಾ ಹಾಗೂ ದೇವಸ್ಥಾನಗಳಲ್ಲಿ ಊಟ ಮಾಡುತ್ತಾ ಮೋದಿಯನ್ನ ಮದುವೆಯಾಗಲು ಧರಣಿ ಮುಂದುವರೆಸಿದ್ದಾರೆ.
ಅಲ್ಲದೆ ಪ್ರತಿಭಟನಾ ಸ್ಥಳವನ್ನ ಜಂತರ್ ಮಂತರ್‍ನಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂಬ ರಾಷ್ಟ್ರೀಯ ಹಸಿರು ಪೀಠದ ಆದೇಶದ ಬಗ್ಗೆ ಆತಂಕವಾಗಿದೆ ಎಂದಿದ್ದಾರೆ. ಸರ್ಕಾರ ನನ್ನನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ರೆ ಏನು ಮಾಡ್ಬೇಕೆಂದು ಗೊತ್ತಾಗ್ತಿಲ್ಲ. ಈಗಾಗಲೇ ಒಂದು ತಿಂಗಳಾಗಿದೆ. ಈ ಜಾಗ ಚೆನ್ನಾಗಿದೆ ಹಾಗೂ ಅನುಕೂಲಕರವಾಗಿದೆ ಎಂದು ಆಕೆ ಹೇಳಿದ್ದಾರೆ.