ಅಯೋಧ್ಯೆ (ಉತ್ತರ ಪ್ರದೇಶ): ರಾಮಮಂದಿರ (Ram Mandir) ಉದ್ಘಾಟನೆ ದಿನವಾದ ಜ.22 ರಂದು ಪಿಂಕ್ ಸಿಟಿ ಜೈಪುರದಲ್ಲಿ (Jaipur) ಎಲ್ಲಾ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚುವ ನಿರ್ಧಾರವನ್ನು ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಕೊಂಡಿದೆ.
ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಗೆ ಇಡೀ ದೇಶದಲ್ಲಿ ಸಂತಸದ ವಾತಾವರಣವಿದೆ. ಅದೇ ಸಮಯದಲ್ಲಿ ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಪಿಂಕ್ ಸಿಟಿ ಜೈಪುರದಲ್ಲಿ ಎಲ್ಲಾ ಮಾಂಸ ಮತ್ತು ಮದ್ಯದ ಅಂಗಡಿಗಳು ಜನವರಿ 22 ರಂದು ಬಂದ್ ಆಗಲಿವೆ. ಇದನ್ನೂ ಓದಿ: ಶ್ರೀರಾಮ ಮಾಂಸಾಹಾರಿಯಾಗಿದ್ದ.. ಬೇಟೆಯಾಡಿ ತಿನ್ನುವ ರಾಮ ನಮ್ಮವ: ಎನ್‌ಸಿಪಿ ನಾಯಕ ವಿವಾದಾತ್ಮಕ ಹೇಳಿಕೆ
ಸಿವಿಲ್ ಲೈನ್ಸ್ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ್ ಶರ್ಮಾ ಅವರು ಮೇಯರ್ ಮುನೇಶ್ ಗುರ್ಜಾರ್ ಅವರಿಗೆ ಈ ನಿರ್ಧಾರ ಕೈಗೊಳ್ಳಲು ಮನವಿ ಮಾಡಿದ್ದರು. ಇದೇ ವೇಳೆ ಮೇಯರ್ ಅನುಮೋದನೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜ.22 ರಂದು ಜೈಪುರದಲ್ಲಿ ಮಹಾದೀಪೋತ್ಸವ
ಜನವರಿ 22 ರಂದು ಜೈಪುರದಲ್ಲಿ ಮಹಾದೀಪೋತ್ಸವ ಆಯೋಜಿಸಲಾಗಿದೆ. ಶಾಸಕ ಬಲ್ಮುಕುಂದಾಚಾರ್ಯ ಬಳಿಕ ಇದೀಗ ಮತ್ತೊಬ್ಬ ಶಾಸಕ ಜೈಪುರದಲ್ಲಿ ಅಕ್ರಮ ಮಾಂಸದ ಅಂಗಡಿಗಳು ನಡೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುಧವಾರ ಜೈಪುರದ ಮುನ್ಸಿಪಲ್ ಕಾರ್ಪೊರೇಷನ್ ಹೆರಿಟೇಜ್‌ನಲ್ಲಿ ನಡೆದ ಸಭೆಯಲ್ಲಿ ಸಿವಿಲ್ ಲೈನ್ಸ್ ಶಾಸಕ ಗೋಪಾಲ್ ಶರ್ಮಾ ಅವರು, ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮಮಂದಿರ ಉದ್ಘಾಟನೆ ದಿನದಲ್ಲಿ ಜೈಪುರದಲ್ಲಿ ಮಹಾದೀಪೋತ್ಸವ ಆಚರಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ – ಇಬ್ಬರ ಬಂಧನ
ಮದ್ಯ, ಮಾಂಸದ ಅಂಗಡಿ ಬಂದ್
ಜೈಪುರದಲ್ಲಿ ಮಹಾದೀಪೋತ್ಸವಕ್ಕಾಗಿ ಧಾರ್ಮಿಕ ಸ್ಥಳಗಳನ್ನು ರಂಗೋಲಿ, ದೀಪಗಳಿಂದ ಅಲಂಕಾರ ಮಾಡಲಾಗುವುದು. ಈ ದಿನ ಕಮಿಷನರ್ ಹಾಗೂ ಇತರೆ ಅಧಿಕಾರಿಗಳು ಧಾರ್ಮಿಕ ಸ್ಥಳಗಳಲ್ಲಿ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಈ ದಿನ ಜೈಪುರದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಲಾಗುವುದು. ಮೇಯರ್ ಮುನೇಶ್ ಗುರ್ಜರ್, ಜ.22 ರಂದು ಎಲ್ಲಾ ಧಾರ್ಮಿಕ ಸ್ಥಳಗಳು, ದೇವಾಲಯಗಳು ಮತ್ತು ಗುರುದ್ವಾರಗಳಲ್ಲಿ ಮಹಾದೀಪೋತ್ಸವ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.