ಚಿಕ್ಕೋಡಿ (ಬೆಳಗಾವಿ): ಹೀರೆಕುಡಿ (Hirekudi) ನಂದಿ ಪರ್ವತ ಆಶ್ರಮದಿಂದ (Nandi Parvatha Ashram) ನಾಪತ್ತೆಯಾಗಿದ್ದ ಜೈನಮುನಿ (Jain Muni) ಬರ್ಬರವಾಗಿ ಹತ್ಯೆಯಾಗಿದ್ದು, ಸುದ್ದಿ ತಿಳಿದ ಭಕ್ತರು (Devotees) ಸ್ವಾಮೀಜಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಸ್ವಾಮಿಜಿ ಹತ್ಯೆಯಿಂದ ನಿತ್ಯ ಭಕ್ತರಿಂದ ತುಂಬಿ ತುಳುಕುತ್ತಿದ್ದ ಆಶ್ರಮದಲ್ಲಿ ಇಂದು (ಶನಿವಾರ) ನೀರವ ಮೌನ ಆವರಿಸಿದೆ.
ಜುಲೈ 6ರಂದು ಹೀರೆಕುಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ ಹಿನ್ನೆಲೆ ಭಕ್ತರು ಆಶ್ರಮದ ಸುತ್ತಮುತ್ತ ಸ್ವಾಮೀಜಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಚಿಕ್ಕೋಡಿ (Chikkodi) ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ನಾಪತ್ತೆಯಾಗಿದ್ದ ಜೈನಮುನಿ ಹತ್ಯೆ – ಭಕ್ತರ ದೂರಿನ ಬಳಿಕ ಪ್ರಕರಣ ಬೆಳಕಿಗೆ
Advertisement
Advertisement
ಕಳೆದ 15 ವರ್ಷಗಳಿಂದ ನಂದಿ ಪರ್ವತ ಆಶ್ರಮದಲ್ಲಿ ವಾಸವಿದ್ದ ಜೈನಮುನಿಗೆ ಅವರ ಸೇವಕಿ ಕುಸುಮಾ ಗೌರಾಜ್ ನಿತ್ಯ ಆಹಾರದ ವ್ಯವಸ್ಥೆ ಮಾಡುತ್ತಿದ್ದರು. ಸ್ವಾಮೀಜಿಯ ಹತ್ಯೆಯ ಸುದ್ದಿ ಬಳಿಕ ಕುಸುಮಾ ಗೌರಾಜ್ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇತ್ತ ಕೊಲೆ ರಹಸ್ಯ ಬಾಯ್ಬಿಟ್ಟ ಆರೋಪಿಗಳು ಸ್ವಾಮಿಜಿಯ ಶವವನ್ನು ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಹೊರವಲಯದ ತೆರೆದ ಕೊಳವೆ ಬಾವಿಗೆ ಹಾಕಿರುವುದಾಗಿ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಕ್ಕಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೆಟ್ರೋ ಕಾಮಗಾರಿ ವೇಳೆ ಕ್ರೇನ್ ಪಲ್ಟಿ- ಸಿಲ್ಕ್ ಬೋರ್ಡ್ ಬಳಿ ತಪ್ಪಿದ ಅನಾಹುತ
Advertisement
Advertisement
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದಲ್ಲಿ ಶೋಧಕಾರ್ಯ ಮುಂದುವರಿಯುತ್ತಿರುವ ಹಿನ್ನೆಲೆ ಗದ್ದೆಗೆ ತೆರಳುವ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಖಟಕಬಾವಿ – ಮುಗಳಖೋಡ ರಸ್ತೆಯನ್ನು ಬಂದ್ ಮಾಡಿರುವ ಪೊಲೀಸರು ಶೋಧಕಾರ್ಯವನ್ನು ಮುಂದುವರಿಸುತ್ತಿದ್ದಾರೆ. ಕಾರ್ಯಾಚರಣೆ ಸ್ಥಳದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಎಸ್‌ಪಿ ಡಾ.ಸಂಜೀವ್ ಪಾಟೀಲ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ: ಎಣ್ಣೆ ಏಟಿನಲ್ಲಿ ಪತಿ ಪ್ರತಿನಿತ್ಯ ಜಗಳ- ನೇಣಿಗೆ ಕೊರಳೊಡ್ಡಿದ ಪತ್ನಿ
Web Stories