CinemaLatestMain PostSandalwoodSouth cinema

`ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

ಜನಿಕಾಂತ್ (Rajanikanth) 169ನೇ ಚಿತ್ರ `ಜೈಲರ್’ (Jailer) ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ(Shivarajkumar) ಕೂಡ ತಲೈವಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಚಿತ್ರದ ಸೆಟ್‌ನಲ್ಲಿ ಶಿವನನ್ನು ಶಿವಕಾರ್ತಿಕೇಯನ್ ಭೇಟಿಯಾಗಿದ್ದಾರೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ `ಜೈಲರ್’ (Jailer)ಸಿನಿಮಾದಲ್ಲಿ ರಜನಿಕಾಂತ್ ಜೊತೆ ಕನ್ನಡದ ಸೂಪರ್ ಹೀರೋ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣನ ಫಸ್ಟ್ ಲುಕ್ ಸಖತ್ ಸದ್ದು ಮಾಡಿತ್ತು. ಈ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಶಿವನನ್ನು ತಮಿಳಿನ ಹೀರೋ ಶಿವಕಾರ್ತಿಕೇಯನ್ (Sivakarthikeyan) ಮೀಟ್ ಮಾಡಿದ್ದಾರೆ.

 

View this post on Instagram

 

A post shared by DrShivaRajkumar (@nimmashivarajkumar)

`ಜೈಲರ್’ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಲೈವಾ ಬಹುನಿರೀಕ್ಷಿತ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಇರಲಿದ್ದಾರೆ. ಆದರೆ ಅವರ ಪಾತ್ರದ ಬಗ್ಗೆ ಗುಟ್ಟುನ್ನ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಶಿವಣ್ಣನನ್ನು ಮೀಟ್ ಆಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಎಂಗೇಜ್ ಆದ ಖುಷಿಯಲ್ಲಿ ಗೆಳೆಯನ ಜೊತೆ ಆಮೀರ್‌ ಖಾನ್‌ ಪುತ್ರಿಯ ಲಿಪ್‌ಲಾಕ್

ತಲೈವಾ 169ನೇ ಸಿನಿಮಾವಾಗಿರುವ ಕಾರಣ ಚಿತ್ರದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

Live Tv

Leave a Reply

Your email address will not be published. Required fields are marked *

Back to top button