‘ಜೈಲರ್’ಗೆ ಸೆನ್ಸಾರ್ ಕಟ್, ರಜನಿ-ಶಿವಣ್ಣ ಸೀನ್‌ಗೆ ಬಿತ್ತಾ ಕತ್ತರಿ?

Public TV
1 Min Read
jailer

ಜನಿಕಾಂತ್ ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ಬಹುಭಾಷಾ ಕಲಾವಿದರ ದಂಡೇ ಇದೆ. ಇದೇ ಆಗಸ್ಟ್ 10ಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಹೀಗಿರುವಾಗ ‘ಜೈಲರ್’ ತಂಡಕ್ಕೆ ಸೆನ್ಸಾರ್ ಶಾಕ್ ಕೊಟ್ಟಿದೆ. ರಜನಿ- ಶಿವಣ್ಣ ಸೀನ್‌ಗೆ ಕತ್ತರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

Jailer

ತಲೈವಾ ನಟನೆಯ ‘ಜೈಲರ್’ ಸಿನಿಮಾ ತೆರೆಗೆ ಬರುವ ಮುನ್ನವೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಸಿನಿಮಾದ ಫಸ್ಟ್ ಲುಕ್, ಕಾವಾಲಾ (Kaavala) ಸಾಂಗ್ ಸೇರಿದಂತೆ ಜೈಲರ್ ಝಲಕ್ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಇದೆಲ್ಲದರ ನಡುವೆ ಜೈಲರ್ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ.

Jailer film 2 1

ಆ್ಯಕ್ಷನ್ ಎಂಟರ್‌ಟೈನರ್ ‘ಜೈಲರ್’ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದಲ್ಲಿ ಹಿಂಸಾತ್ಮಕ ದೃಶ್ಯಗಳು ಹೆಚ್ಚಿದ್ದು ಅದನ್ನು ಕಮ್ಮಿ ಮಾಡುವಂತೆ ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಸೂಚಿಸಿದೆಯಂತೆ. ಒಟ್ಟು 11 ಕಟ್ ಚಿತ್ರದಲ್ಲಿ ಮೋಹನ್ ಲಾಲ್ (Mohanlal) ಮ್ಯಾಥೂ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಒಂದು ಮಲಯಾಳಂ ಪದವನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆಯಂತೆ. ಇದನ್ನೂ ಓದಿ:ರಜನಿ ‘ಜೈಲರ್’ ಜೊತೆ ಜಗ್ಗೇಶ್ ‘ತೋತಾಪುರಿ 2’ ಸಿನಿಮಾ

jailer film 1

‘ಜೈಲರ್’ ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್(Rajanikanth), ನರಸಿಂಹ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಮುತ್ತುವೇಲ್, ನರಸಿಂಹ ಹಾಗೂ ಮ್ಯಾಥ್ಯೂ ಮೂವರು ಸಿಗರೇಟ್ ಸೇದುವ ಸನ್ನಿವೇಶವೊಂದಿದೆಯಂತೆ. ಆ ದೃಶ್ಯದ ಕ್ಲೋಸ್‌ಅಪ್ ಶಾಟ್ಸ್ ಕತ್ತರಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಮ್ಯಾಥ್ಯೂ, ವ್ಯಕ್ತಿಯೊಬ್ಬನನ್ನು ಕೊಲ್ಲುವುದು ಸೇರಿದಂತೆ ಹಲವು ಸಣ್ಣ ದೃಶ್ಯಗಳಿಗೆ ಕತ್ತರಿ ಬಿದ್ದಿದೆಯಂತೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ರಜನಿಕಾಂತ್, ಶಿವಣ್ಣ(Shivarajkumar), ಮೋಹನ್‌ಲಾಲ್, ತಮನ್ನಾ, ರಮ್ಯಾ ಕೃಷ್ಣ, ಜಾಕಿ ಶ್ರಾಫ್, ಯೋಗಿ ಬಾಬು ನಟಿಸಿದ್ದಾರೆ. ‘ಜೈಲರ್’ ಸಿನಿಮಾ ಬರೋಬ್ಬರಿ 2 ಗಂಟೆ 49 ನಿಮಿಷ ಕಾಲಾವಧಿಯಲ್ಲಿ ಮೂಡಿ ಬಂದಿದೆ. ಕನ್ನಡದ ಜೊತೆ ಮೂರು ಭಾಷೆಗಳಲ್ಲಿ ಜೈಲರ್ ಸಿನಿಮಾ ರಿಲೀಸ್ ಆಗಲಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article