ಕಾಲಿವುಡ್ (Kollywood) ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಬದರೀನಾಥ್ (Badrinath) ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜೈಲರ್ ಸಿನಿಮಾ ಆಗಸ್ಟ್ 10ಕ್ಕೆ ರಿಲೀಸ್ ಆಗಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಬೆನ್ನಲ್ಲೇ ತಲೈವಾ ಬದರೀನಾಥ್ ಸನ್ನಿಧಿಗೆ ಭೇಟಿ ನೀಡಿದ್ದಾರೆ.
ಉತ್ತರಾಖಂಡದ ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಭಿಮಾನಿಗಳ ಜೊತೆ ತಲೈವಾ ಸಂವಹನ ನಡೆಸಿದ್ದರು. ಜೈಲರ್ (Jailer) ಸಿನಿಮಾ ರಿಲೀಸ್ ಸಮಯದಲ್ಲೇ ತಲೈವಾ ಪ್ರವಾಸದಲ್ಲಿದ್ದರು. ಬಳಿಕ ಹಿಮಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಬರೋಬ್ಬರಿ 20 ವರ್ಷಗಳ ಬಳಿಕ ದಳಪತಿ ವಿಜಯ್ ಜೊತೆ ಜ್ಯೋತಿಕಾ ನಟನೆ
‘ಅಣ್ಣಾತ್ತೆ’ ಚಿತ್ರದ 2 ವರ್ಷಗಳ ನಂತರ ಜೈಲರ್ ಆಗಿ ರಜನಿಕಾಂತ್ ಮಿಂಚಿದ್ದಾರೆ. ತಲೈವಾ ಸಿನಿಮಾದಲ್ಲಿ ಶಿವಣ್ಣ (Shivarajkumar), ಮೋಹನ್ ಲಾಲ್ (Mohanlal), ಜಾಕಿ ಶ್ರಾಫ್, ಸುನೀಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೂರಾರು ಕೋಟಿ ಕಲೆಕ್ಷನ್ ಮಾಡ್ತಿರೋ ‘ಜೈಲರ್'(Jailer) ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.