ರಜನಿಕಾಂತ್ ಅವರು (Rajinikanth) ‘ಕೂಲಿ’ ಮತ್ತು ‘ಜೈಲರ್ 2’ (Jailer 2) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಯುವ ನಿರ್ದೇಶಕನ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಕಾನ್ 2025: ಕತ್ತಲ್ಲಿ ಮೋದಿ ಚಿತ್ರವಿರುವ ನೆಕ್ಲೆಸ್ ಧರಿಸಿ ನಟಿ ಗುಜ್ಜರ್ ವಾಕ್!
ತಲೈವಾಗೆ 74 ವರ್ಷವಾದ್ರೂ ಅವರಿಗುವ ಚಾರ್ಮ್, ಅಭಿಮಾನಿಗಳ ಕ್ರೇಜ್ ಇದುವರೆಗೂ ಕಮ್ಮಿಯಾಗಿಲ್ಲ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಂಟೆಂಟ್ ಹೊತ್ತು ಅವರು ಬರುತ್ತಾರೆ. ಅಂತಹದ್ದೇ ಭಿನ್ನವಾಗಿರುವ ಚಿತ್ರಕ್ಕೆ ತಲೈವಾ ಓಕೆ ಎಂದಿದ್ದಾರಂತೆ. ಅಂತೆ ಸುಂದರಣಿಕಿ, ಸರಿಪೋಧಾ ಶನಿವಾರಂ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ವಿವೇಕ್ ಅತ್ರೇಯ ಈಗ ತಲೈವಾ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ ನಿಧನ- ಭಾವುಕ ಪೋಸ್ಟ್ ಹಂಚಿಕೊಂಡ ದಚ್ಚು


 
					

 
		 
		 
		 
		 
		 
		 
		 
		 
		