ಜೈಲಿನಲ್ಲಿರುವ ಇರಾನ್‌ನ ನರ್ಗೆಸ್‌ ಮೊಹಮ್ಮದಿಗೆ ಶಾಂತಿ ನೊಬೆಲ್‌ ಪ್ರಶಸ್ತಿ

Public TV
2 Min Read
Narges Mohammadi

– 154 ಛಡಿ ಏಟು ತಿಂದಿದ್ದ ಹೋರಾಟಗಾರ್ತಿ

ಓಸ್ಲೋ: ಜೈಲಿನಲ್ಲಿರುವ ಇರಾನ್ (Iran) ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿ (Narges Mohammadi) ಅವರು 2023 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳೆಯರ ದಬ್ಬಾಳಿಕೆ ವಿರುದ್ಧದ ಹೋರಾಟಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

ಇರಾನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಹಾಗೂ ಎಲ್ಲರಿಗೂ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಹೋರಾಟಕ್ಕಾಗಿ ನರ್ಗೆಸ್ ಮೊಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ನೀಡಲು ನಿರ್ಧರಿಸಿದೆ ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಪ್ರಕಟಿಸಿದೆ. ಇದನ್ನೂ ಓದಿ: ಸಿರಿಯಾದಲ್ಲಿ ಉಗ್ರರ ಅಟ್ಟಹಾಸ – ಡ್ರೋನ್‌ ದಾಳಿಗೆ 100 ಕ್ಕೂ ಹೆಚ್ಚು ಮಂದಿ ಬಲಿ

nobel prize

ಪ್ರಶಸ್ತಿ ಮೊತ್ತವು 8.32 ಕೋಟಿ ರೂ. ನಗದು ಹಾಗೂ ಫಲಕ ಒಳಗೊಂಡಿದೆ. ಮಹಿಳಾ ಹಕ್ಕುಗಳಿಗಾಗಿ ವಿವಿಧ ದೇಶಗಳಲ್ಲಿ ಒಂದಾಗಿರುವ ಇರಾನ್‌ನ ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಮೊಹಮ್ಮದಿ ಕೂಡ ಒಬ್ಬರು. ಕುರ್ದಿಷ್ ಯುವತಿ ಮಹ್ಸಾ ಅಮಿನಿ ನೈತಿಕ ಪೊಲೀಸ್‌ಗಿರಿಯಿಂದ ಕೊಲ್ಲಲ್ಪಟ್ಟರು. ನಂತರ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು.

ನೊಬೆಲ್ ಪ್ರಶಸ್ತಿ ವಿಜೇತರಾದ ನರ್ಗೆಸ್‌ ಅವರನ್ನು 13 ಬಾರಿ ಬಂಧಿಸಲಾಗಿದೆ. ಐದು ಬಾರಿ ಅಪರಾಧಿ ಎಂದು ಘೋಷಿಸಲಾಗಿದೆ. 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆಯನ್ನೂ ನೋಡಲಾಗಿತ್ತು ಎಂದು ನೊಬೆಲ್‌ ಪ್ರಶಸ್ತಿ ವೆಬ್‌ಸೈಟ್‌ ತಿಳಿಸಿದೆ. ಇದನ್ನೂ ಓದಿ: ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

ರಾಷ್ಟ್ರದ ವಿರುದ್ಧ ಅಪಪ್ರಚಾರ ಮಾಡಿದ್ದಾರೆಂಬ ಆರೋಪದ ಮೇಲೆ ಟೆಹ್ರಾನ್‌ ಜೈಲಿನಲ್ಲಿ ನರ್ಗೆಸ್‌ ಮೊಹಮ್ಮದಿ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಮೊಹಮ್ಮದಿ ಅವರು, 2003 ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಶಿರಿನ್ ಎಬಾಡಿ ನೇತೃತ್ವದ ಸರ್ಕಾರೇತರ ಸಂಸ್ಥೆ ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್‌ನ ಉಪ ಮುಖ್ಯಸ್ಥರಾಗಿದ್ದಾರೆ.

Web Stories

Share This Article