ಬಾಗಲಕೋಟೆ: ಖೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಂಡು ಬಾಗಲಕೋಟೆ ಜಿಲ್ಲಾ ಕಾರಾಗೃಹ ಅಧೀಕ್ಷಕನೊಬ್ಬ ದರ್ಬಾರ್ ನಡೆಸುತ್ತಿದ್ದಾನೆ.
ಜಿಲ್ಲಾ ಕಾರಾಗೃಹ ಅಧೀಕ್ಷಕ ದತ್ತಾತ್ರಿ ಮೇದಾ ವಿಚಾರಣಾಧೀನ ಖೈದಿಗಳಿಂದ ಮನೆ ಕೆಲಸ ಮಾಡಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ್ದಾನೆ. ಮನೆ ಕೆಲಸ ಮಾಡಿ ಖೈದಿಗಳು ಹೊರಬರುತ್ತಿರುವ ವೀಡಿಯೋವನ್ನು ಬಾಗಲಕೋಟೆಯ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕೆಂಪು ಬಾವುಟ ಹಾರಿಸಲಿದ್ದಾರೆ ಕೇರಳ ಸಿಎಂ
Advertisement
Advertisement
ಬಾಗಲಕೋಟೆಯ ನವನಗರದಲ್ಲಿರುವ ದತ್ತಾತ್ರಿ ಮೇದಾ ತನ್ನ ಮನೆ ಕೆಲಸ ಮಾಡಲು ನಾಲ್ಕರಿಂದ ಐದು ಜನ ಖೈದಿಗಳನ್ನು ಮನೆಗೆ ಕರೆಸಿಕೊಂಡಿದ್ದನು. ಈ ಬಗ್ಗೆ ಪ್ರಶ್ನಿಸಲು ಮುಂದಾಗ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರಿಗೆ ಹೋಗಿ ಪ್ಲೀಜ್, ಅವರು ಯಾವಾಗಲೂ ಬರುವುದಿಲ್ಲ, ಯಾವಾಗಲೋ ಒಮ್ಮೆ ಕರೆದುಕೊಂಡು ಬರುತ್ತೇನೆ. ಅವರನ್ನೇಲ್ಲಾ ಕಳುಹಿಸಿದ್ದೇನೆ. ಸುಮ್ಮನೆ ಬಿಟ್ಟು ಬಿಡಿ ಎಂದು ಹೇಳಿದ್ದಾನೆ.
Advertisement
Advertisement
ತಮ್ಮ ಈ ಮಾತಿನ ಮೂಲಕ ಖೈದಿಗಳನ್ನು ಮನೆ ಕೆಲಸಮಾಡಿಸಿಕೊಳ್ಳಲು ಬಳಸಿಕೊಂಡಿರುವುದಾಗಿ ದತ್ತಾತ್ರಿ ಮೇದಾ ಅವರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯವರ ಬಂಡಲ್‍ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆ – ಪ್ರಿಯಾಂಕ್ ಖರ್ಗೆ ಟೀಕೆ