ಬಾಗ್ ಮಿಲ್ಕಾ ಬಾಗ್, ಬಾಜಿಗರ್, ರಾ.ಒನ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ (Bollywood) ನಟ ದಲೀಪ್ ತಾಹೀಲ್ (Dalip Taheel) ಗೆ ಮಹಾರಾಷ್ಟ್ರದ ಬಾಂದ್ರಾದ ಅಡಿಷನಲ್ ಚೀಫ್ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ಪ್ರಕಟಿಸಿದೆ. ಈ ಕುರಿತಂತೆ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡುವುದಾಗಿ ನಟ ತಿಳಿಸಿದ್ದಾರೆ.
2018ರಲ್ಲಿ ನಡೆದ ಡ್ರಂಕ್ ಅಂಡ್ ಟ್ರೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಲೀಪ್ ಅವರಿಗೆ ಎರಡು ತಿಂಗಳು ಜೈಲು ಮತ್ತು ಐದು ನೂರು ರೂಪಾಯಿ ದಂಡ ವಿಧಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.
ದಲೀಪ್ ವಿರುದ್ಧ 2018ರಲ್ಲಿ ಹಿಟ್ ಅಂಡ್ ರನ್ ಕೇಸು ದಾಖಲಾಗಿತ್ತು. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದ ನಟ ಆಟೋವೊಂದಕ್ಕೆ ಗುದ್ದಿದ್ದಾರೆ ಎಂದು ದೂರು ದಾಖಲಾಗಿತ್ತು. ನಟ ಮದ್ಯ ಸೇವೆ ಮಾಡಿರೋದು ಸಾಬೀತಾಗಿತ್ತು. ಇದೆಲ್ಲವನ್ನೂ ಪರಿಶೀಲಿಸಿದ ಮಾನ್ಯ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.
Web Stories