ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಲಾಗಿದ್ದು, ಅಲ್ಲಿಯವರೆಗೂ ಆರ್ಯನ್ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿಯೇ ಉಳಿಯಬೇಕಾಗುತ್ತದೆ.
Advertisement
ಕೋವಿಡ್-19 ಪರೀಕ್ಷೆಯಲ್ಲಿ ಆರ್ಯನ್‍ಗೆ ನೆಗಟಿವ್ ವರದಿ ಬಂದ ನಂತರ, ಗುರುವಾರ ಅವರನ್ನು ಬ್ಯಾರಕ್‍ಗೆ ವರ್ಗಾಯಿಸಲಾಯಿತು. ಇದೀಗ ಆರ್ಯನ್‍ಗೆ ಖೈದಿ ಸಂಖ್ಯೆ ಎನ್956 ಎಂದು ನಿಗದಿಪಡಿಸಲಾಗಿದೆ. ಆರ್ಯನ್‍ಗೆ ಜೈಲಿನಲ್ಲಿರಲು ಗೊಂದಲ, ಉದ್ವಿಗ್ನತೆ ಹಾಗೂ ಅನ್ ಕಂಫರ್ಟ್‍ಟೇಬಲ್ ಆಗುತ್ತಿದ್ದು, ಜೈಲಿನ ಆಹಾರ ಕೂಡ ಇಷ್ಟವಾಗುತ್ತಿಲ್ಲ. ಹೀಗಾಗಿ ಮಗನಿಗೆ ಕ್ಯಾಂಟೀನ್‍ನಲ್ಲಿ ಊಟದ ವ್ಯವಸ್ಥೆಗೊಳಿಸಲು ಆರ್ಥರ್ ರೋಡ್ ಜೈಲು ಅಧಿಕಾರಿಗಳಿಗೆ ಶಾರೂಖ್ ಖಾನ್ 4,500ರೂ. ಮನಿ ಆರ್ಡರ್ ಕಳುಹಿಸಿದ್ದಾರೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!
Advertisement
Advertisement
ಜೈಲು ಅಧಿಕಾರಿಗಳು ಆರ್ಯನ್ ಖಾನ್ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಎಲ್ಲಾ ಡ್ರಗ್ ಪ್ರಕರಣ ಆರೋಪಿಗಳಿಗೆ ಭದ್ರತೆ ಒದಗಿಸುವ ಸಲುವಾಗಿ ಇತರ ಖೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ
Advertisement
ಮುಂಬೈ ಸಮುದ್ರದಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಈ ಅರ್ಜಿ ವಿಚಾರಣೆ ನಡೆದಿದ್ದು, ನ್ಯಾ.ವಿವಿ ಪಾಟೀಲ್ ಸುದೀರ್ಘ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದ್ದಾರೆ.