ಬೆಂಗಳೂರು: ಬಿಜೆಪಿ, ಆರ್ ಎಸ್‍ಎಸ್‍ನವರು ಉಗ್ರಗಾಮಿಗಳು ಎಂದಿರೋ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಇವತ್ತು ಜೈಲ್ ಭರೋ ಕೈಗೊಂಡಿದೆ.
ನಾನೂ ಉಗ್ರ, ನನ್ನನ್ನು ಬಂಧಿಸಿ ಘೋಷಣೆಯಡಿ ಬಿಜೆಪಿ ಕಾರ್ಯಕರ್ತರು ಜೈಲಿಗೆ ಮುತ್ತಿಗೆ ಹಾಕಲಿದ್ದಾರೆ. ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ಜೈಲಿಗೆ ಮುತ್ತಿಗೆ ಹಾಕ್ಬೇಕಿತ್ತು. ಆದ್ರೆ ವೀವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಜೈಲ್ ಭರೋ ಇರಲ್ಲ. ಇದನ್ನೂ ಓದಿ: ಬಿಜೆಪಿಯವರು ಉಗ್ರರು ಎಂದು ಹೇಳಿಕೆ ನೀಡಿ ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ
Advertisement
Advertisement
ಇತ್ತೀಚೆಗೆ ಚಾಮರಾಜನಗರದ ನಾಗವಳ್ಳಿಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿ, ಬಜರಂಗದಳ ಹಾಗೂ ಆರ್ ಎಸ್‍ಎಸ್ ನಲ್ಲೂ ಉಗ್ರಗಾಮಿಗಳಿದ್ದಾರೆ ಎಂದು ಹೇಳಿಕೆ ನೀಡಿದ್ದರು.
Advertisement
ಆದ್ರೆ ಈ ಬಗ್ಗೆ ಗುರುವಾರದಂದು ಸ್ಪಷ್ಟನೆ ನೀಡಿದ ಸಿಎಂ, ನಾನು, ಎಲ್ಲಿ ಯಾರಿಗೆ ಉಗ್ರಗಾಮಿ ಎಂದಿದ್ದೇನೆ. ಆರ್ ಎಸ್‍ಎಸ್, ಬಜರಂಗದಳದವರು ಹಿಂದುತ್ವದ ಹೆಸರಲ್ಲಿ ಉಗ್ರಗಾಮಿಗಳಂತೆ ವರ್ತಿಸ್ತಿದ್ದಾರೆ ಅಂತ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಅಂತ ಹೇಳಿದ್ರು. ಇದನ್ನೂ ಓದಿ: ಬಿಜೆಪಿ, ಆರ್ ಎಸ್ಎಸ್‍ನಲ್ಲೂ ಉಗ್ರರಿದ್ದಾರೆ: ಸಿಎಂ ಸಿದ್ದರಾಮಯ್ಯ
Advertisement
ಸಮಾಜದ ಶಾಂತಿ ಕದಡುವ ಆರ್ ಎಸ್‍ಎಸ್ ಆಗಲಿ, ಪಿಎಫ್‍ಐ ಆಗಲಿ ಯಾವುದೇ ಸಂಘಟನೆಯಾದ್ರೂ ನಾವು ಕ್ರಮ ತೆಗೆದುಗೊಳ್ಳುತ್ತೇವೆ. ಕೋಮುವಾದ ಸಂಘಟನೆಗಳನ್ನು ಸಹಿಸುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಸಿಎಂ ಅವರ ಈ ಹೇಳಿಕೆಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು.