ಕಂಪಾಲ (ಉಗಾಂಡಾ): ವಿದೇಶಾಂಗ ಸಚಿವ ಎಸ್. ಜೈಶಂಕರ್ (Jai Shankar) ಅವರು ಇಂದು ಉಗಾಂಡಾದ (Uganda) ಕಂಪಾಲಾದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಮತ್ತು ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ಡಾ.ರಿಯಾದ್ ಅಲ್-ಮಲಿಕಿ (Riyad al-Maliki) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
Good to meet with Palestinian FM Dr. Riyad al-Maliki in Kampala this afternoon.
Had a detailed and comprehensive discussion on the ongoing conflict in Gaza. Exchanged views on its humanitarian and political dimensions. Reiterated India’s support for a two-state solution.… pic.twitter.com/9GJNzPqqfg
— Dr. S. Jaishankar (@DrSJaishankar) January 20, 2024
Advertisement
ಶುಕ್ರವಾರ ಆರಂಭವಾದ ಅಲಿಪ್ತ ಚಳವಳಿಯ (NAM) ಎರಡು ದಿನಗಳ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜೈಶಂಕರ್ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಜೈಶಂಕರ್ ಅವರು, ಡಾ. ರಿಯಾದ್ ಅಲ್-ಮಲಿಕಿ ಅವರನ್ನು ಭೇಟಿಯಾಗಲು ಸಂತೋಷವಾಯಿತು ಎಂದಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಅವರೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು. ಅವರು ಕೂಡ ಸಂಘರ್ಷದ ಮಾನವೀಯ ಮತ್ತು ರಾಜಕೀಯ ಆಯಾಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
Advertisement
Advertisement
ಮಾನವೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದ್ದು, ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತಿರಬೇಕು ಎಂದು ಜೈಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ
Advertisement
Pleased to call on Sri Lankan President @RW_UNP on the sidelines of the NAM Summit in Kampala.
Appreciate his continued guidance for the advancement of our bilateral initiatives. India’s commitment is reflected in our Neighbourhood First and SAGAR policy. pic.twitter.com/i0XifvdEs0
— Dr. S. Jaishankar (@DrSJaishankar) January 20, 2024
ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಉಪಕ್ರಮಗಳ ಪ್ರಗತಿಯನ್ನು ಚರ್ಚಿಸಿದರು. ಕಂಪಲಾದಲ್ಲಿ ನಡೆದ NAM ಶೃಂಗಸಭೆಯ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಜೈಶಂಕರ್ ಅವರು ಪೋಸ್ಟ್ ಮಾಡಿದ್ದಾರೆ. ವಿದೇಶಿ ವಿನಿಮಯ ಮೀಸಲುಗಳ ತೀವ್ರ ಕೊರತೆಯಿಂದಾಗಿ 2022 ರಲ್ಲಿ ಶ್ರೀಲಂಕಾವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಭಾರತವು ತನ್ನ ‘ನೈಬರ್‌ಹುಡ್ ಫಸ್ಟ್’ ನೀತಿಗೆ ಅನುಗುಣವಾಗಿ ಸಾಲ ಸೌಲಭ್ಯಗಳು ಮತ್ತು ಕರೆನ್ಸಿ ಬೆಂಬಲದ ಮೂಲಕ ಬಹು ಆಯಾಮದ ಸಹಾಯವನ್ನು ನೀಡಿತು ಎಂದರು.
ಒಟ್ಟಿನಲ್ಲಿ NAM ಶೃಂಗಸಭೆಯಲ್ಲಿ ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಜೈಶಂಕರ್ ಅವರು ಧನ್ಯವಾದಗಳನ್ನು ತಿಳಿಸಿದರು. ಉಗಾಂಡಾದ ಅಧ್ಯಕ್ಷ ಸ್ಥಾನಕ್ಕೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಶ್ರೀಲಂಕಾ, ಪ್ಯಾಲೆಸ್ಟೇನ್ ಜೊತೆಗೆ ಬಹ್ರೇನ್, ಸರ್ಬಿಯಾ, ಬೊಲಿವಿಯಾ, ಅಜೆರ್ಬೈಜಾನ್ ಮತ್ತು ವೆನೆಜುವೆಲಾದ ತಮ್ಮ ಸಹವರ್ತಿಗಳೊಂದಿಗೆ ಕೂಡ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.