ನವದೆಹಲಿ: ಉಕ್ರೇನ್‍ನಲ್ಲಿ ಸಿಕ್ಕಿಕೊಂಡಿರುವ ಭಾರತೀಯ ವಿದ್ಯಾರ್ಥಿನಿ ಸಹಾಯಕ್ಕೆ ಕೇಳಿಕೊಳ್ಳುತ್ತಿರುವ ವೀಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ವಿದೇಶಾಂಗ ಸಚಿವರಿಗೆ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
Advertisement
ಪ್ರಿಯಾಂಕಾ ಅವರು ಟ್ವಿಟ್ಟರ್ ನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಟ್ಯಾಗ್ ಮಾಡಿರುವ ಅವರು, ದಯವಿಟ್ಟು ಭಾರತೀಯ ಮಕ್ಕಳನ್ನು ಏನಾದರೂ ಮಾಡಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು. ನಮ್ಮ ಇಡೀ ದೇಶವು ಉಕ್ರೇನಿನಲ್ಲಿ ಇರುವ ಮಕ್ಕಳು ಮತ್ತು ಕುಟುಂಬದವರ ಜೊತೆಗೆ ಇದ್ದೇವೆ. ಈ ವೀಡಿಯೋದಲ್ಲಿರುವ ಭಾರತೀಯ ವಿದ್ಯಾರ್ಥಿನಿ ಬಹಳ ಆತಂಕಗೊಂಡಿರುವುದು ಕಾಣಿಸುತ್ತಿದ್ದಾಳೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ
Advertisement
…@narendramodi जी, @DrSJaishankar जी यूक्रेन से आ रहे भारतीय छात्र-छात्राओं के वीडियो मन को बहुत ही ज्यादा व्यथित करने वाले हैं। इन बच्चों को भारत वापस लाने के लिए जो कुछ भी बन पड़ता है , भगवान के लिए, वह करिए। पूरा देश इन छात्र-छात्राओं और इनके परिवारों के साथ है।…1/2 pic.twitter.com/PfmBw8McLY
— Priyanka Gandhi Vadra (@priyankagandhi) February 27, 2022
Advertisement
ಪ್ರಿಯಾಂಕಾ ಅವರು ಶೇರ್ ಮಾಡಿರುವ ವೀಡಿಯೋದಲ್ಲಿ ಭಾರತೀಯ ವಿದ್ಯಾರ್ಥಿನಿ ಉಕ್ರೇನಿನಲ್ಲಿ ಸಿಕ್ಕಿಬಿದ್ದಿರುವುದಕ್ಕೆ ತುಂಬಾ ಆತಂಕಗೊಂಡಿದ್ದು, ಬಿಕ್ಕಿ-ಬಿಕ್ಕಿ ಅತ್ತಿದ್ದಾಳೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಕೆರೆದುಕೊಂಡು ಹೋಗಿ ಎಂದು ಭಾರತೀಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾಳೆ.
Advertisement
ಈ ವೀಡಿಯೋದಲ್ಲಿ ಗರಿಮಾ ಮಿಶ್ರಾ ವಿದ್ಯಾರ್ಥಿನಿ, ನಾವು ಉಕ್ರೇನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಮಗೆ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನಂತರ ಅಳುತ್ತ ವಿದ್ಯಾರ್ಥಿನಿ, ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ. ದಯವಿಟ್ಟು ನಮಗೆ ಸಹಾಯ ಮಾಡಿ. ಜೈ ಹಿಂದ್! ಜೈ ಭಾರತ್! ಯಾರೇ ನೋಡ್ತಾ ಇದ್ರು ಈ ವೀಡಿಯೋ ಶೇರ್ ಮಾಡಿ ಎಂದು ಬಿಕ್ಕಿ-ಬಿಕ್ಕಿ ವಿದ್ಯಾರ್ಥಿನಿ ಅಳುತ್ತಿದ್ದಾಳೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!