ರಜನಿಕಾಂತ್ (Rajinikanth) ನಟನೆಯ ಜೈಲರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದ್ದಂತೆಯೇ ಅವರ ಮುಂದಿನ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ಅವರ 170ನೇ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಪ್ರಶ್ನೆ ಕೂಡ ಮೂಡಿದಿದೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿ.ಎಸ್. ಜ್ಞಾನವೇಲ್ (TS Gnanavel) ಡೈರೆಕ್ಷನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಅಂದುಕೊಂಡಂತೆ ಆಗಿದ್ದರೆ ರಜನಿಕಾಂತ್ ಅವರ 170ನೇ ಸಿನಿಮಾವನ್ನು ಲೋಕೇಶ್ ಕನಗರಾಜು (Lokesh Kanagaraju) ನಿರ್ದೇಶನ ಮಾಡಬೇಕಿತ್ತು. ಆದರೆ, ಅವರು ದಳಪತಿ ವಿಜಯ್ ಅವರ ಲಿಯೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಾಗಿಯೇ ಜ್ಞಾನವೇಲ್ ಗೆ ಈ ಅದೃಷ್ಟ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ವಿಡಿಯೋ ಲೀಕ್ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಕೃತಿ ಕರಬಂಧ
ಜೈ ಭೀಮ್ ಸಿನಿಮಾದ ಮೂಲಕ ಭಾರೀ ಸಂಚಲವನ್ನು ಉಂಟು ಮಾಡಿದವರು ಜ್ಞಾನವೇಲ್. ನೂರಾರು ಕೋಟಿ ರೂಪಾಯಿಯನ್ನು ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಬಾಚಿತು. ಒಂದೊಳ್ಳೆ ಸಿನಿಮಾ ಎನ್ನುವ ಹೆಸರನ್ನೂ ಮಾಡಿತು. ಜಾಗತಿಕ ಮಟ್ಟದಲ್ಲಿ ಈ ಚಿತ್ರಕ್ಕೆ ವಿಶೇಷ ಮನ್ನಣೆ ಕೂಡ ಸಿಕ್ಕಿದೆ. ಹೀಗಾಗಿ ರಜನಿ ಸಿನಿಮಾ ಕೂಡ ಹೊಸ ರೀತಿಯಲ್ಲೇ ಇರಲಿದೆ ಎಂದು ಹೇಳಲಾಗುತ್ತದೆ.
ಜೈಲರ್ ಸಿನಿಮಾ ನಂತರ ರಜನಿ ಅಧ್ಯಾತ್ಮವನ್ನು ಅರಸಿಕೊಂಡು ಹೋಗಿದ್ದರು. ಇದೀಗ ಮತ್ತೆ ವಾಪಸ್ಸು ಚೆನ್ನೈಗೆ ವಾಪಸ್ಸಾಗಿದ್ದಾರೆ. ಇನ್ನೂ ಕೆಲವು ದಿನಗಳ ಬಳಿಕ ಹೊಸ ಸಿನಿಮಾದ ಕೆಲಸದಲ್ಲಿ ಅವರು ನಿರತರಾಗುತ್ತಾರೆ ಎನ್ನುವುದು ಸದ್ಯಕ್ಕಿರುವ ವರ್ತಮಾನ.
Web Stories