ಮುಂಬೈ: ಅನಿಲ್ ಅಂಬಾನಿ ಅವರ ಮಗ ಜೈ ಅನ್ಮೋಲ್ ಅಂಬಾನಿ ಮತ್ತು ಕ್ರಿಶ್ ಶಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿವಾಹಕ್ಕೆ ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ ಎಂದ ಮೂಲಗಳಿಂದ ತಿಳಿದು ಬಂದಿದೆ.
ರಿಲಯನ್ಸ್ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ರಾಯಲ್ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. ಅನ್ಮೋಲ್ ಬಾಳ ಸಂಗಾತಿಯಾಗಿ ಬರುತ್ತಿರುವ ಕ್ರಿಶಾ ಕೂಡಾ ಉದ್ಯಮಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ನಿಶ್ಚಿತಾರ್ಥ, ಮತ್ತು ಮದುವೆಗೂ ಮುದಲು ಕುಟುಂಬದ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಾಜಕಾರಣಿ ಸುಪ್ರಿಯಾ ಸುಳೆ ಅವರು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
Advertisement
View this post on Instagram
Advertisement
ಇಶಾ ಅಂಬಾನಿ ಅವರ ಮದುವೆಯಂತೆ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಅವರ ಮದುವೆಗೆ ಹಾಜರಾಗುವ ನಿರೀಕ್ಷೆಯಿದೆ. ಅನಿಲ್ ಅಂಬಾನಿ ಕುಟುಂಬವು ಪ್ರಸ್ತುತ ಮದುವೆಗೆ ಹಾಜರಾಗಬೇಕಾದವರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ
Advertisement
View this post on Instagram
Advertisement
ಈ ಹಿಂದೆ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರ ವಿವಾಹವು ಅತ್ಯಂತ ಸಂಭ್ರಮಾಚರಣೆಯಿಂದ ನಡೆದಿತ್ತು. 2018 ರಲ್ಲಿ ಆನಂದ್ ಪಿರಮಾಲ್ ಜೊತೆ ನಡೆದ ಅದ್ದೂರಿ ಮದುವೆಗೆ ಕುಟುಂಬ ನೂರಾರು ಕೋಟಿ ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈಗ ಅಂಬಾನಿ ಕುಟುಂಬ ಮತ್ತೊಂದು ಅದ್ದೂರಿ ವಿವಾಹಕ್ಕೆ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.