ಮುಂಬೈ: ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ, ಕ್ರಿಶಾ ಶಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಮದುವೆ ಅದ್ಧೂರಿತಯಾಗಿ ನಡೆದಿದೆ.
ಜೈ ಅನ್ಮೋಲ್ ಅಂಬಾನಿ ಭಾನುವಾರ ಸಂಜೆ ಮುಂಬೈನ ಕಫೆ ಪರೇಡ್‍ನಲ್ಲಿರುವ ಅವರ ಕುಟುಂಬದ ಮನೆಯಾದ ಸೀ ವಿಂಡ್‍ನಲ್ಲಿ ಕ್ರಿಶಾ ಶಾ ಅವರನ್ನು ವಿವಾಹವಾದರು. ವರ ಬಿಳಿ ಶೆರ್ವಾನಿ, ವಧು ಕೆಂಪು ಮತ್ತು ಚಿನ್ನದ ಬಣ್ಣದ ಲೆಹೆಂಗಾವನ್ನು ತೊಟ್ಟಿದ್ದರು. ವಧು, ವರ ಸಾಕಷ್ಟು ವಜ್ರದ ಆಭರಣಗಳನ್ನು ತೊಟ್ಟುಕೊಂಡಿದ್ದರು. ಅದ್ಧೂರಿಯಾಗಿ ಮದುವೆ ನೆರವೆರಿದೆ. ಅಂಬಾನಿ ಕುಟುಂಬ ಸ್ನೇಹಿತರು, ಗಣ್ಯರು, ಬಾಲಿವುಡ್ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು. ಅಂಬಾನಿ ಕುಟುಂಬ ಸೋಮವಾರ ತಮ್ಮ ಮನೆಯಲ್ಲಿ ಪಾರ್ಟಿಯನ್ನು ನೀಡಲಿದ್ದು, ಅಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ನವವಿವಾಹಿತರಿಗೆ ಅಭಿನಂದನೆಗಳು ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ ಬಿ.ಎಸ್ ಯಡಿಯೂರಪ್ಪ
View this post on Instagram
ಕ್ರಿಶಾ ಶಾ ಯಾರು?: ಮುಂಬೈನಲ್ಲಿ ಹುಟ್ಟಿ ಬೆಳೆದ ಕ್ರಿಶಾ ಸಾಮಾಜಿಕ ಕಾರ್ಯಕರ್ತೆ, ಉದ್ಯಮಿಯಾಗಿದ್ದಾರೆ. ಅಂತರಾಷ್ಟ್ರೀಯ ನೆಟ್‍ವರ್ಕಿಂಗ್‍ನಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ. ಸಾಮಾಜಿಕ ನೆಟ್‍ವರ್ಕಿಂಗ್ ಕಂಪನಿಯಾದ ಡಿಸ್ಕೋದ ಸಂಸ್ಥಾಪಕರೂ ಕೂಡ ಆಗಿದ್ದಾರೆ.
View this post on Instagram
ಕ್ರಿಶಾ ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಉದ್ಯಮಿಯಾಗಲು ದೇಶಕ್ಕೆ ಮರಳಿದರು. ಕೋವಿಡ್‍ನಿಂದರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಕ್ಯಾಂಪಿನ್ ಕೈಗೊಂಡರು. ಕ್ಯಾಲಿಪೋರ್ನಿಯಾ ವುಶ್ವವಿದ್ಯಾಲಯದ ರಾಜಕೀಯ ಅರ್ಥಶಾಸ್ತ್ರದಲ್ಲಿ ಪದವೀಧರರಾಗಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಸೋಶಿಯಲ್ ಪಾಲಿಸಿ ಮತ್ತು ಡೆವಲ್ಪಮೆಂಟ್ ವಿಷಯದಲ್ಲೂ ಪದವಿ ಪಡೆದುಕೊಂಡಿದ್ದಾರೆ.