ರಾಷ್ಟ್ರ ಲಾಂಛನದಲ್ಲಿ ಘರ್ಜಿಸುತ್ತಿರುವ ಆ ಸಿಂಹವೇ ಮೋದಿ: ಜಗ್ಗೇಶ್

Public TV
1 Min Read
NARENDRA MODI AND JAGGESH

ತುಮಕೂರು: ಆರೋಪಗಳು ಶಿವ, ಬ್ರಹ್ಮ, ಕೃಷ್ಣನನ್ನೇ ಬಿಟ್ಟಿಲ್ಲ. ಶಮಂತಕ ಮಣಿ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು ಅಂತಹದರಲ್ಲಿ ಮೋದಿಯನ್ನು ಬಿಡ್ತಾರಾ? ಘರ್ಜಿಸುತ್ತಿರುವ ಆ ಸಿಂಹ ಆಯಪ್ಪನೇ ಮೋದಿ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಲಾಂಛನ ತಿರುಚಿದ ಆರೋಪ ಮಾಡಿದವರಿಗೆ ತಿರುಗೇಟು ನೀಡಿದರು.

jaggesh 1 1

ತುಮಕೂರಿನಲ್ಲಿ ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಷ್ಟ್ರದ ಜನ ಎದೆಯುಬ್ಬಿಸಿ ಹೇಳಬೇಕಾದದ್ದು ಒಳ್ಳೆಯ ಧೀಮಂತ ನಾಯಕ ಸಿಕ್ಕಿದ್ದಾನೆ. ಘರ್ಜಿಸುತ್ತಿರುವ ಆ ಸಿಂಹ ಆಯಪ್ಪನೇ ಮೋದಿ. ಅಶೋಕ ಲಾಂಛನದ ಮೂಲ ಬೇಕಾದವರು ಮ್ಯೂಸಿಯಂನಲ್ಲಿ ನೋಡಲಿ. ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ ಎಂದರು. ಇದನ್ನೂ ಓದಿ: ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ

national emblem

ಇಷ್ಟು ವರ್ಷ ಲಾಂಛನದ ಬಾಯಿ ಮುಚ್ಚಿತ್ತು. ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೇ ಘರ್ಜನೆ ಮಾಡುತ್ತಿದೆ. ಸುಖಾಸುಮ್ಮನೆ ಮೋದಿ ವಿರುದ್ಧ ಮಾತನಾಡುತ್ತಾರೆ. ಆರಾಧಿಸುವವರ ಸಂಖ್ಯೆ 98% ಇದೆ. ವಿರೋಧಿಸುವವರ ಸಂಖ್ಯೆ 2% ಇದೆ. ಅದಕ್ಕೆ ಏನೂ ಮಾಡೋಕೆ ಆಗಲ್ಲ ಎಂದು ಮೋದಿ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ: ಭಾರತ ಹಿಂದೂರಾಷ್ಟ್ರ; ಇಲ್ಲಿರುವ ದೇವರು ಒಂದೇ – ಮೋಹನ್‌ ಭಾಗವತ್‌

ತುಮಕೂರಿನ ಸಿದ್ದಗಂಗಾ ಮಠಕ್ಕೆ ಪತ್ನಿ ಪರಿಮಳ ಸಮೇತ ಭೇಟಿ ನೀಡಿದ ಜಗ್ಗೇಶ್ ಗುರು ಪೂರ್ಣಿಮಾ ದಿನದಂದು ಗುರುಗಳ ದರ್ಶನ ಪಡೆದಿದ್ದೇನೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *