ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ ನನಗೆ ಕನ್ನಡ ಮಾತನಾಡಲು ಬರಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ನವರಸ ನಾಯಕ ಜಗ್ಗೇಶ್ ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೇ ನಿಮ್ಮ ಬೆಳವಣಿಗೆ ಆದದ್ದು ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡ ಪರ ಸಂಘಟನೆಗಳು ಗರಂ ಆಗಿರುವ ಸುದ್ದಿಯನ್ನು ರಿಟ್ವೀಟ್ ಮಾಡಿ ಜಗ್ಗೇಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯು ಬೆಳೆದ ಅನೇಕ ಸ್ನೇಹಿತರಿದ್ದಾರೆ. ಅವರೆಲ್ಲ ಇಂದು ಕನ್ನಡದಲ್ಲೇ ಮಾತನಾಡಿ ಕನ್ನಡವನ್ನು ಅಪಾರ ಗೌರವಿಸುತ್ತಾರೆ. ಅದು ಅವರ ಕನ್ನಡದ ಸಂಸ್ಕೃತಿ. ಆ ಗುಣವಿರದ ಇಂದಿನ ಪೀಳಿಗೆಯ ನಡಾವಳಿ ದುರಾದೃಷ್ಟಕರ ನಡೆ. ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೇ ನಿಮ್ಮ ಬೆಳವಣಿಗೆ ಆದದ್ದು ನೆನಪಿರಲಿ” ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಕನ್ನಡ ಮಾತನಾಡಲು ತುಂಬಾ ಕಷ್ಟ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಕನ್ನಡ ಪರ ಹೋರಾಟಗಾರರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
Advertisement
ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ಆಂಗ್ಲ ಭಾಷೆ ಬಳಸುತ್ತಿದ್ದರು. ನನಗೆ ಕನ್ನಡ ಸರಿಯಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಟಾಲಿವುಡ್‍ನಲ್ಲಿ ಒಂದು ಸಿನಿಮಾ ತೆರೆಕಾಣುವುದರೊಳಗೆ ಅವರು ಸ್ವಚ್ಛವಾಗಿ ತೆಲಗು ಮಾತನಾಡಲು ಆರಂಭಿಸಿದ್ದರು ಎಂದು ಕನ್ನಡ ಹೋರಾಟಗಾರರು ದೂರಿನಲ್ಲಿ ಉಲ್ಲೇಖಿಸಿದ್ದರು.
Advertisement