ಎರಡು ದಿನಗಳ ಹಿಂದೆಯಷ್ಟೇ ಮಳೆಯಿಂದಾಗಿ ಸ್ವತಂ ಊರಿನಲ್ಲಿರುವ ತಮ್ಮ ಮನೆ ಜಲಾವೃತಗೊಂಡ ಬಗ್ಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಟ್ವಿಟ್ ಮಾಡಿದ್ದರು. ಮಾಯಸಂದ್ರದಲ್ಲಿ ತಮ್ಮ ಮನೆಯಲ್ಲಿ ನೀರು ತುಂಬಿಕೊಂಡಿದೆ. ನೀರು ಹರಿಯುವ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರ ಪರಿಣಾಮ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಎಂದು ಬರೆದುಕೊಂಡಿದ್ದರು. ಕೂಡಲೇ ಇದರತ್ತ ಗಮನ ಹರಿಸುವಂತೆ ನೀರಾವರಿ ಇಲಾಖೆಗೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು.
Advertisement
ತಮ್ಮದೇ ಪಕ್ಷದ್ದೆ ಆಡಳಿತವಿರುವ ರಾಜ್ಯಸಭಾ ಸದಸ್ಯರೊಬ್ಬರು ಈ ರೀತಿ ಮನವಿ ಮಾಡಿಕೊಂಡರೆ, ಸಾಮಾನ್ಯರ ಗತಿ ಏನು ಎಂದು ವಿರೋಧ ಪಕ್ಷಗಳು ಜಗ್ಗೇಶ್ ಟ್ವಿಟಿಗೆ ಆಡಿಕೊಂಡು ನಕ್ಕಿದ್ದರು. ಆದರೂ, ಜಗ್ಗೇಶ್ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಆಗಿರುವ ಸಮಸ್ಯೆಯನ್ನು ಸರಿ ಮಾಡಿದ್ದಾರೆ. ಹಾಗಾಗಿ ಮತ್ತೆ ಜಗ್ಗೇಶ್ ಟ್ವಿಟ್ ಮಾಡಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ
Advertisement
Advertisement
ಪಾಕಿಸ್ತಾನ ಮುಳುಗಿದೆ. ಭಾರತ ಮಳೆಗೆ ನಲುಗಿದೆ. ಲಂಕೆ ಹಾಳಾಗಿದೆ. ಆದರೂ, ಭಾರತ ಜಗ್ಗದೆ ತಲೆಯೆತ್ತಿ ನಿಂತಿದೆ. ಒಬ್ಬ ಚಿಂತಕ ನರೇಂದ್ರ ಮೋದಿ ದೂರದೃಷ್ಟಿಗೆ. ಸಣ್ಣ ಸಮಸ್ಯೆಗೆ ನಮ್ಮ ದೊರೆಗೆ ವಿನಂತಿಸಿದೆ. ಟ್ವಿಟರ್ ಅನಿಸಿಕೆಗೆ ಕಾಂಗ್ರೆಸ್ ಬಂಧುಗಳು ಅಣಕಿಸಿದರು. ಗೆದ್ದಂತೆ ಬೀಗಿದರು. ನಮ್ಮ ಗಂಡು ಮಗ ಬೊಮ್ಮಾಯಿ ಸಮಸ್ಯೆ ಪರಿಹರಿಸಿದರು ಎಂದು ಜಗ್ಗೇಶ್ ಟ್ವಿಟ್ ಮಾಡಿದ್ದಾರೆ.