ಹಿರಿಯ ನಟ ಜಗ್ಗೇಶ್ ಅವರಿಗೆ 59 ವರ್ಷ ವಯಸ್ಸಾಗಿದೆ. ಅವರ ಸ್ನೇಹಿತರು ಒಂದು ವರ್ಷದ ಹಿಂದಿಯೇ ನಿವೃತ್ತಿಯಾಗಿದ್ದಾರೆ. ಹೀಗೊಂದು ಅಚ್ಚರಿಯ ಬರಹವನ್ನು ಪ್ರಕಟಿಸಿ ಮಾನಸಿಕ ನೆಮ್ಮದಿಯ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದಾರೆ ನಟ ಜಗ್ಗೇಶ್. ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ
ಸದಾ ನಗಿಸುತ್ತಲೇ ಜಗತ್ತಿನ ಜಂಜಡ ಮರೆಯುವಂತೆ ಮಾಡುವ ಜಗ್ಗೇಶ್, ಈ ವಯಸ್ಸಿನಲ್ಲೂ ಜಿಮ್ ನಲ್ಲಿ ಕೆಲವು ಹೊತ್ತು ಕಳೆಯುತ್ತಾರೆ. ಅದೆಷ್ಟೇ ಶೂಟಿಂಗ್ ಒತ್ತಡವಿದ್ದರೂ, ವ್ಯಾಯಾಮ ಮರೆಯುವುದಿಲ್ಲ. ಹಲವು ಕಿಲೋ ಮೀಟರ್ ನಡೆದುಕೊಂಡೇ ಹೋಗಿ ಬಿಡುತ್ತಾರೆ. ಜತೆಗೆ ತಾವು ಕಂಡುಕೊಂಡ ಆರೋಗ್ಯ ಪದ್ಧತಿಯನ್ನು ಅಭಿಮಾನಿಗಳಿಗೆ ಹೇಳುತ್ತಲೇ ಇರುತ್ತಾರೆ. ಈ ಬಾರಿಯೂ ಅದನ್ನೇ ಮಾಡಿದ್ದಾರೆ. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ
ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಜಗ್ಗೇಶ್, ‘ನನ್ನ ಅನೇಕ ಸ್ನೇಹಿತರು ಅವರ ಕಾರ್ಯಕ್ಷೇತ್ರದಿಂದ ನಿವೃತ್ತಿಯಾಗಿ 1 ವರ್ಷ ಆಗಿದೆ. 59 ವರ್ಷದಕ್ಕೆ ಅವರವರ ಮಕ್ಕಳು ಅವರವರ ಮಕ್ಕಳು ಸಂಸಾರ ಎಂದು ಪಕ್ಕ ಸರಿದು ಬದುಕುತ್ತಿದ್ದಾರೆ. ಅದು ಜಗತ್ತಿನ ನಿಯಮ. ಇಷ್ಟಕ್ಕೆ ಜಗತ್ತು ಶೂನ್ಯವಾದಂತೆ 59 ನೇ ವಯಸ್ಸಿಗೆ ಮಾನಸಿಕ ಒತ್ತಡದಿಂದ ಬಳಲಿ ಬಿಪಿ, ಡಯಾಬಿಟಿಸ್ ಬರಮಾಡಿಕೊಂಡು ನರಳುತ್ತಿದ್ದಾರೆ. ಅನೇಕ ಸ್ನೇಹಿತರು, ಬಂಧುಗಳು ಮರಣ ಹೊಂದಿದ್ದಾರೆ. ಇದನ್ನು ನೋಡಿದಾಗ, ಕೇಳಿದಾಗ ದುಃಖವಾಗುತ್ತದೆ. ನನ್ನ ಅನಿಸಿಕೆ ಒಪ್ಪುವವರಿಗೆ ಪ್ರೀತಿಯಿಂದ ಒಂದು ಕಿವಿಮಾತು, ಬರುವಾಗ ಒಬ್ಬರೆ, ಹೋಗುವಾಗ ಒಬ್ಬರೆ. ಮತ್ತೆ ಈ ಜಗತ್ತಿಗೆ ಬರುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ, ಇರುವಾಗ ಇಲ್ಲದರ ಬಗ್ಗೆ ದುಃಖಿಸಿ ಕೊರಗಿ ರೋಗ ಆಹ್ವಾನಿಸಿ ಬದುಕುವ ಬದಲು ಕೆಲಸಕ್ಕೆ ಬಾರದ ಚಿಂತೆಗೆ ಜಾಗ ಕೊಡದೆ ಇದ್ದಿದ್ದರಲ್ಲಿ ಸುಖಿಸಿ, ರಮಿಸಿ, ಆನಂದಿಸಿ’ ಎಂದು ಸುದೀರ್ಘವಾಗಿ ಜಗ್ಗೇಶ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿ
ಜಗ್ಗೇಶ್ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಗುರು ಪ್ರಸಾದ್ ನಿರ್ದೇಶನದಲ್ಲಿ ‘ರಂಗನಾಯಕ’, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ‘ರಾಘವೇಂದ್ರ ಸ್ಟೋರ್ಸ್’ ಮತ್ತು ವಿಜಯ ಪ್ರಸಾದ್ ನಿರ್ದೇಶನದಲ್ಲಿ ‘ತೋತಾಪುರಿ’ ಚಿತ್ರಗಳು ಸಿದ್ಧವಾಗಿವೆ. ಮೂರು ಸಿನಿಮಾದಲ್ಲೂ ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.