– ಅಭಿಮಾನಿ ಕೊಟ್ಟ ರಾಯರ ಫೋಟೋ ತಳ್ಳಿದ್ದ ಸಿದ್ದರಾಮಯ್ಯ
ಬೆಂಗಳೂರು: ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಘವೇಂದ್ರ ಸ್ವಾಮಿಗಳ (Guru Raghavendra Swamy) ಫೋಟೋ ನೀಡಲು ಬಂದಾಗ ಫೋಟೋ ಸ್ವೀಕಾರ ಮಾಡದೇ ಫೋಟೋವನ್ನ ತಳ್ಳಿದ ನಡೆಗೆ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್ (Jaggesh) ತೀವ್ರ ಬೇಸರ ಹೊರಹಾಕಿದ್ದಾರೆ.
ಸಿದ್ರಾಮಯ್ಯ ಅವರು ರಾಘವೇಂದ್ರ ಸ್ವಾಮಿಯ ಫೋಟೋ ತಳ್ಳುತ್ತಿರುವ ವಿಡಿಯೋಜೊತೆಗೆ ಸಂದೇಶವೊಂದನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರನ್ಯಾರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್ – ವಿಚಾರಣೆಗೆ ಹಾಜರಾಗುವಂತೆ ಡಿಜಿಪಿ ರಾಮಚಂದ್ರರಾವ್‌ಗೆ ನೋಟಿಸ್
ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ!
ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ,
ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು
ರಾಯರಿದ್ದಾರೆ🙏 ಎದ್ದುಬರುತ್ತಾರೆ🙏
ಕಾಯಬೇಕು..!!
ಜೈಹಿಂದ್🙏 pic.twitter.com/WXdSsaZVvK
— ನವರಸನಾಯಕ ಜಗ್ಗೇಶ್ (@Jaggesh2) January 20, 2026
ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ!. ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ, ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು. ರಾಯರಿದ್ದಾರೆ.. ಎದ್ದುಬರುತ್ತಾರೆ.. ಕಾಯಬೇಕು ಅಂತ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸದೇ ಬನ್ನಿ – ಉಡುಪಿ ಶ್ರೀಕೃಷ್ಣ ಮಠದಲ್ಲಿ ಡ್ರೆಸ್‌ಕೋಡ್
ಏನಿದು ಘಟನೆ?
ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ರಾಘವೇಂದ್ರ ಸ್ವಾಮಿಗಳ ಫೋಟೋ ನೀಡಲು ಬಂದಾಗ ಫೋಟೋ ಸ್ವೀಕಾರ ಮಾಡದೇ ಫೋಟೋವನ್ನ ತಳ್ಳಿದ್ದರು. ಮುಖ್ಯಮಂತ್ರಿಗಳ ಕಾವೇರಿ ನಿವಾಸದ ಬಳಿ ಘಟನೆ ನಡೆದಿತ್ತು. ಬೆಳಗಾವಿ ಪ್ರವಾಸಕ್ಕೆ ತೆರಳಲು HAL ಗೆ ತೆರಳುವ ವೇಳೆ ಕಾವೇರಿ ನಿವಾಸದ ಗೇಟ್ ಬಳಿ ಸಾರ್ವಜನಿಕರಿಂದ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸ್ವೀಕರ ಮಾಡ್ತಿದ್ದರು. ಆಗ ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯಗೆ ರಾಘವೇಂದ್ರ ಫೋಟೋ ಕೊಡಲು ಮುಂದಾದ್ರು.
ಈ ವೇಳೆ ಸಿಎಂ ರಾಘವೇಂದ್ರ ಸ್ವಾಮಿ ಫೋಟೋ ಸ್ವೀಕಾರ ಮಾಡದೇ ಫೋಟೋ ತಳ್ಳಿದ್ರು. ಅಲ್ಲದೆ ಅಭಿಮಾನಿ ಮೇಲೆ ಗರಂ ಆದ್ರು. ಈ ಹಿಂದೆ ಕುಂಕುಮ, ಪೇಟ ತಿರಸ್ಕರಿಸುತ್ತಿದ್ದ ಸಿಎಂ ಇದೀಗ ರಾಘವೇಂದ್ರ ಸ್ವಾಮಿ ಫೋಟೋ ತಿರಸ್ಕಾರ ಮಾಡಿದ ಘಟನೆ ನಡೆದಿದೆ. ಇದಕ್ಕೆ ವಿಪಕ್ಷ ನಾಯಕರೂ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: 3,000 ರೂ.ಗೆ ಆಧಾರ್ – ಅಕ್ರಮ ವಾಸಿಗಳಿಗೆ ಸ್ವರ್ಗವಾಗಿದ್ಯಾ ಬೆಂಗಳೂರು? ʻಪಬ್ಲಿಕ್ ಟಿವಿʼ ರಿಯಾಲಿಟಿಯಲ್ಲಿ ಸತ್ಯ ಬಟಾಬಯಲು!

