ಒಂದು ಸಮುದಾಯಕ್ಕೆ ಅಪಮಾನ ಮಾಡುವಂತಹ ಹೇಳಿಕೆ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಕೆ.ಎಸ್ ಭಗವಾನ್ (KS Bhagwan) ವಿರುದ್ಧ ಬೆಳಗ್ಗೆಯಿಂದ ಪ್ರತಿಭಟನೆ ನಡೆಯುತ್ತಿದೆ. ಈ ಕುರಿತಂತೆ ನಟ ಜಗ್ಗೇಶ್ (Jaggesh) ಕೂಡ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಸರಣಿಯಾಗಿ ಎಕ್ಸ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸನ್ಮಾನ್ಯ ಭಗವಾನರೆ, ಸಾಧ್ಯವಾದರೆ ಬಡತನ ನಿರ್ಮೂಲನೆ ಹೋರಾಡಿ. ಜಾತಿಯತೆ ದೂರಮಾಡಿ.ಸಾಮರಸ್ಯಕ್ಕೆ ಹೋರಾಡಿ. ದೇಶ ಮೊದಲು ಜಾತಿ ನಂತರ ಎಂದು ಹೋರಾಡಿ. ಎಲ್ಲ ಮಕ್ಕಳಿಗೂ ಸಮಾನ ವಿದ್ಯೆ ಸಿಗಲಿ ಎಂದು ಹೋರಾಡಿ. ಬಡವ ಶ್ರೀಮಂತರ ರೇಖೆ ಅಳಿಸಿ ಬದುಕುವ ಕಲೆ ಕಲಿಸಲು ಹೋರಾಡಿ. ಯಾವುದು ಇದು ಪ್ರಚಾರ ತೆವಲಿನ ಹೋರಾಟ. ಧಿಕ್ಕಾರವಿರಲಿ ನಿಮ್ಮ ಗುಣಕ್ಕೆ ಎಂದು ಬರೆದುಕೊಂಡಿದ್ದಾರೆ.
ಸನ್ಮಾನ್ಯ ಭಗವಾನ ಅವರೆ, ನೀವು ವಿದ್ಯಾವಂತರ? ನೀವು ಜ್ಞಾನಿಗಳ? ನೀವು ಹಿರಿಯರಾ? ನೀವು ಸಮಾಜ ಸುಧಾಕರ? ಒಕ್ಕಲುತನ ಸಮುದಾಯ ಅಣಕಮಾರಿ, ಯಾಕೆ ಕುವೆಂಪು ಅವರ ಮೇಲೆ ಹಾಕಿ ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ. ಕರ್ನಾಟಕ ಆರಕ್ಷಕ ಇಲಾಖೆ ಯಾಕಿ ಮೌನ?. ಸಮಾಜ ಸ್ವಾಸ್ಥ ಕೆಡಿರುವವರ ಮೇಲೆ ಕ್ರಮ ಜರುಗಿಸಿ ಆರಕ್ಷಕ ಮಹಿನೀಯರೆ ಎಂದು ಮತ್ತೊಂದು ಬರಹ ಪೋಸ್ಟ್ ಮಾಡಿದ್ದಾರೆ.
ಭಗವಾನ್ ಮನೆಗೆ ಮುತ್ತಿಗೆ
ನಗರದಲ್ಲಿ ಶುಕ್ರವಾರ (ಅ.13) ನಡೆದ ಮಹಿಷ ಉತ್ಸವದ ವೇಳೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ (KS Bhagawan) ಒಕ್ಕಲಿಗ ಸಮುದಾಯದ (Okkaliga Community) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿಂದು ಪ್ರೊ.ಭಗವಾನ್ ನಿವಾಸಕ್ಕೆ ಮೈಸೂರು ಚಾಮರಾಜ ಕ್ಷೇತ್ರದ ಒಕ್ಕಲಿಗರ ಸಂಘದಿಂದ ಮುತ್ತಿಗೆಗೆ ಯತ್ನಿಸಲಾಯಿತು.
ಅವಹೇಳನಕಾರಿ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು. ಬ್ಯಾರಿಕೇಡ್ ಕಿತ್ತು ಭಗವಾನ್ ಮನೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು (Mysuru City Police) ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಹಾಗೂ ತಳ್ಳಾಟ ನೂಕಾಟವೂ ನಡೆದಿದ್ದು, ಕೆಲವರು ಕೈ ಮತ್ತು ಹಣೆಯ ಭಾಗಕ್ಕೆ ಗಾಯವನ್ನೂ ಮಾಡಿಕೊಂಡರು.
ಶುಕ್ರವಾರ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರೆಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು.
ಒಕ್ಕಲಿಗ ಜನಾಂಗಕ್ಕೆ ಸಂಸ್ಕೃತಿ ಕಲಿಸಿ, ಭಗವಾನ್ ತಾವೂ ಒಕ್ಕಲಿಗ ಸಮುದಾಯದವರು ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದು ಕಡೆ ಸಮುದಾಯವನ್ನೇ ನಿಂದಿಸುತ್ತಾರೆ. ಅವರು ಒಕ್ಕಲಿಗ ಸಮುದಾಯದವರು ಎಂಬುದೇ ಅನುಮಾನವಿದೆ. ಅವರನ್ನು ಈಗಲೆ ಕರೆಸಿ, ಇಲ್ಲವೇ ದೂರು ನೀಡುತ್ತೇವೆ. ಕೂಡಲೇ ಎಫ್‌ಐಆರ್ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ.
Web Stories