ತೋತಾಪುರಿಗೆ 100 ಡೇಸ್ ಶೂಟಿಂಗ್!

Public TV
1 Min Read
THOTAPURI JAGGESH 1

ಬೆಂಗಳೂರು: ಕೆ.ಎ.ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹು ನಿರೀಕ್ಷಿತ ಸಿನಿಮಾ `ತೋತಾಪುರಿ’. ನೀರ್ ದೋಸೆ ಚಿತ್ರದ ಯಶಸ್ವೀ ತಂಡ ಮತ್ತೊಮ್ಮೆ `ತೋತಾಪುರಿ’ಯ ಮೂಲಕ ಒಂದಾಗಿರೋದು ವಿಶೇಷ. ನಿರ್ದೇಶಕ ವಿಜಯಪ್ರಸಾದ್ ಅವರ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ದತ್ತಣ್ಣ, ಸುಮನ್ ರಂಗನಾಥ್ ಮತ್ತೆ ಒಂದಾಗಿದ್ದಾರೆ. ಇದಲ್ಲದೆ ಉದ್ಯಮಿಯ ಪಾತ್ರದಲ್ಲಿ ಡಾಲಿ ಧನಂಜಯ ಮತ್ತು ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತಿದ್ದಾರೆ.

ನಿರ್ಮಾಪಕ ಕೆ ಎ ಸುರೇಶ್ ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ಭರವಸೆ ಈ ಚಿತ್ರ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ತಂಡದ ಬಗ್ಗೆಯೇ ದೊಡ್ಡ ನಿರೀಕ್ಷೆ ಉದ್ಭವವಾಗಿದೆ. ಕನ್ನಡ ಚಿತ್ರ ರಂಗದಲ್ಲಿ ಯಶಸ್ಸನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಿರ್ಮಾಪಕ ಕೆ ಎ ಸುರೇಶ್ `ತೋತಾಪುರಿ’. ಚಿತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ ಜಗ್ಗೇಶ್ ಜೊತೆಯಾಗಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ.

THOTAPURI DHANANJAY 1

ನವರಸ ನಾಯಕ ಜಗ್ಗೇಶ್ ಅವರ ಚಿತ್ರಜೀವನದಲ್ಲಿ ಇದೇ ಮೊದಲ ಬಾರಿಗೆ 100 ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ಕೆ ಎ ಸುರೇಶ್ `ರಾಜು ಕನ್ನಡ ಮೀಡಿಯಂ’ ಚಿತ್ರದ ಯಶಸ್ಸಿನ ನಂತರ ಒಂದು ಭರವಸೆ ಮೂಡಿಸುವ ತಂಡದ ಜೊತೆ ಹಣ ಹೂಡುತ್ತಿದ್ದಾರೆ. ವಿಜಯಪ್ರಸಾದ್ `ಸಿದ್ಲಿಂಗು’ ಸಿನಿಮಾದಲ್ಲಿ ಟೀಚರ್ ಆಗಿದ್ದ ಸುಮನ್ ರಂಗನಾಥ್ ಈ ಚಿತ್ರದಲ್ಲೂ ಪ್ರಮುಖ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ನಂಜೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

`ಎರಡನೇ ಮದುವೆ’, `ಗೋವಿಂದಾಯ ನಮಃ’, ಶ್ರಾವಣಿ ಸುಬ್ರಮಣಿ, ಆರ್ ಎಕ್ಸ್ ಸೂರಿ, ಶಿವಲಿಂಗ ಮತ್ತು ರಾಜು ಕನ್ನಡ ಮೀಡಿಯಂ ನಂತರ ಈ `ತೋತಾಪುರಿ’ಯನ್ನು ನಿರ್ಮಿಸಿರುವ ನಿರ್ಮಾಪಕ ಸುರೇಶ್ ಈ ಚಿತ್ರವನ್ನು ಮಾವಿನ ಹಣ್ಣಿನ ಸೀಸನ್ನಿನಲ್ಲೇ ಬಿಡುಗಡೆ ಮಾಡುವ ಇರಾದೆ ಇಟ್ಟುಕೊಂಡಿದ್ದಾರೆ.

THOTAPURI ADITI PRABHUDEV 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *