ನಾವು ಬೆಳಗಿನ ತಿಂಡಿ ಏನು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಉದಾಹರಣೆಗೆ ದೋಸೆಯಲ್ಲಿ ಎಷ್ಟೆಲ್ಲಾ ವಿಧದ ದೋಸೆ ಮಾಡಬಹುದು ಎಂಬುದು ಏಣಿಸಲು ಸಾಧ್ಯವಿಲ್ಲ. ಹೌದು, ನೀವು ಹೆಚ್ಚು ಮಸಾಲೆ ದೋಸೆ, ಸೆಟ್ ದೋಸೆ ಈರುಳ್ಳಿ ದೋಸೆ ಮಾಡುತ್ತೇವೆ. ದೋಸೆಗಳನ್ನು ಮಾಡಲು ಹಿಂದಿನ ದಿನ ಅಕ್ಕಿಯನ್ನು ನೆನಸಿ ಮಾಡಬೇಕಾಗುತ್ತದೆ. ಆದರೆ ಈ ದೋಸೆ ಮಾಡಲು ಕೇವಲ 10 ನಿಮಿಷ ಸಾಕು. ಫಟ್ ಅಂತ ತಯಾರಾಗುವ ಈ ಸರಳ ದೋಸೆ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ ಹಿಟ್ಟು- 1 ಕಪ್
* ಗೋಧಿ ಹಿಟ್ಟು- 2 ಕಪ್
* ಬೆಲ್ಲದ ಪುಡಿ- ಕಪ್
* ತೆಂಗಿನ ತುರಿ – ಅರ್ಧ ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಸೋಡ- ಸ್ವಲ್ಪ
* ತುಪ್ಪ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪಾತ್ರೆಯೊಂದಕ್ಕೆ ಬೆಲ್ಲವನ್ನು ಹಾಕಿ, ಕಾಯಿಸಿ ಶೋಧಿಸಿಟ್ಟುಕೊಂಡಿರಬೇಕು. ಇದನ್ನೂ ಓದಿ: ಫಟ್ ಅಂತ ಮಾಡಬಹುದು ಮೈದಾ ದೋಸೆ
Advertisement
* ಪಾತ್ರೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲದ ನೀರು, ಏಲಕ್ಕಿ ಪುಡಿ, ಚಿಟಿಕೆಯಷ್ಟು ಉಪ್ಪು, ಅಡುಗೆ ಸೋಡ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
* ನಂತರ ದೋಸೆ ಮಿಶ್ರಣಕ್ಕೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ತವಾವನ್ನು ಬಿಸಿ ಮಾಡಿ ದೋಸೆ ಆಕಾರದಲ್ಲಿ ಮಿಶ್ರಣವನ್ನು ಹಾಕಿ ಬೇಯಿಸಿದರೆ ರುಚಿಯಾದ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ