ಬೆಂಗಳೂರು: ಜಗದೀಶ್ ಶೆಟ್ಟರ್ (Jagadeesh Shettar) ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ನನಗೇನೂ ತೊಂದರೆಯಿಲ್ಲ. ಸ್ಪರ್ಧೆ ಮಾಡಲಿ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸವಾಲ್ ಹಾಕಿದ್ದಾರೆ.
ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಲೋಕಸಭೆ ಅಭ್ಯರ್ಥಿ ಆಗೋ ಇಚ್ಛೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ನಾಯಕರು ಹೀಗಾಗಿ ಸಿಎಂ ಅವರು ಅವರ ಮನೆಗೆ ಹೋಗಿ ಭೇಟಿ ಕೊಟ್ಟಿದ್ದಾರೆ. ಶೆಟ್ಟರ್ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಬಹಳ ಸಂತೋಷ. ಅವರ ಪಕ್ಷದ ಅಭ್ಯರ್ಥಿ ಯಾರು ಅಂತ ನಮ್ಮನ್ನ ಕೇಳೋದು ಬೇಡ ಎಂದರು.
Advertisement
Advertisement
ನಾನು ಈಗ ಬಿಜೆಪಿಯ (BJP) ಹುಬ್ಬಳ್ಳಿ-ಧಾರವಾಡದಲ್ಲಿ ಎಂಪಿ ಆಗಿದ್ದೇನೆ ನಾನು ಹುಬ್ಬಳ್ಳಿಯಿಂದಲೇ ಮತ್ತೆ ಸ್ಪರ್ಧೆ ಮಾಡ್ತೀನಿ.ಶೆಟ್ಟರ್ ಬಂದರೆ ನನಗೇನೂ ಭಯ ಇಲ್ಲ. ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು ಎಂದು ಹೇಳಿದರು. ಇದನ್ನೂ ಓದಿ: ಜೋಶಿ ವಿರುದ್ಧ ಶೆಟ್ಟರ್ ಕಣಕ್ಕಿಳಿಸಲು ಪ್ಲಾನ್- ಲೋಕಸಭಾ ಟಿಕೆಟ್ ಆಫರ್ ಕೊಟ್ಟ ಸಿಎಂ
Advertisement
ಕಾಂಗ್ರೆಸ್ ಪ್ಲಾನ್ ಏನು?: ಲೋಕಸಭಾ ಚುನಾವಣೆಗೆ (Loksabha Election) ಪ್ರಹ್ಲಾದ್ ಜೋಶಿ ವಿರುದ್ಧ ಜಗದೀಶ್ ಶೆಟ್ಟರನ್ನು ಕಣಕ್ಕಿಳಿಸಲು ಕಾಂಗ್ರೆಸ್ (Congress) ಮಾಸ್ಟರ್ ಪ್ಲಾನ್ ಮಾಡಿದೆ. ಶೆಟ್ಟರ್ ಭೇಟಿಯ ಬಳಿಕ ಸಿಎಂ ಅವರು ಈ ಗುಟ್ಟನ್ನು ಬಿಟ್ಟಕೊಟ್ಟರು. ಶೆಟ್ಟರ್ ನಿವಾಸದ ಮುಂದೆಯೇ ಲೋಕಸಭಾ ಟಿಕೆಟ್ ಆಫರ್ ಕೊಟ್ಟರು. ಶೆಟ್ಟರ್ ಗೆ ಟಿಕೆಟ್ ನೀಡುವ ವಿಚಾರವಾಗಿ ಸ್ಥಳೀಯವಾಗಿ ಕಾರ್ಯಕರ್ತರ ಮತ್ತು ಶಾಸಕರಿಂದ ಅಭಿಪ್ರಾಯ ಕೇಳುತ್ತಾ ಇದ್ದೀವಿ.ಅವರು ಕೂಡ ಆಕಾಂಕ್ಷಿ ಅಂತ ಅಂದುಕೊಂಡಿದ್ದೀವಿ ಎಂದು ಸಿಎಂ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿ ನಗುತ್ತಲೇ ನಾನು ಆಕಾಂಕ್ಷಿ ಅಲ್ಲಾ ಎಂದು ಶೆಟ್ಟರ್ ಹೇಳಿದರು.
Advertisement
ನಮ್ಮ ಶಾಸಕರು, ಕಾರ್ಯಕರ್ತರು ಯಾರಿಗೆ ಹೇಳ್ತಾರೆ ಅವರಿಗೆ ಟಿಕೆಟ್ ಕೊಡುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಕೂಡ ಒಬ್ಬೊಬ್ಬ ಸಚಿವರನ್ನು ವೀಕ್ಷರನ್ನು ನೇಮಕ ಮಾಡಿದ್ದೇವೆ. ಅವರು ಅಭಿಪ್ರಾಯ ನನ್ನ ಕಲೆಕ್ಟ್ ಮಾಡುತ್ತಿದ್ದಾರೆ. ಅಭಿಪ್ರಾಯ ಕಲೆಕ್ಟ್ ಮಾಡಿ ಪ್ಯಾನೆಲ್ ಕೊಡಿ ಅಂತ ಹೇಳಿದ್ದೇವೆ. ಅವರಲ್ಲಿ ಯಾರು ಸೂಕ್ತ ಆಗ್ತಾರೆ ಅಂತ ಅಭ್ಯರ್ಥಿನಾ ಆಯ್ಕೆ ಮಾಡುತ್ತೇವೆ ಎಂದರು.