ಅಮರಾವತಿ: ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ದ್ವೇಷ ಹೆಚ್ಚಾಗುತ್ತಿದ್ದು, ಕೃಷ್ಣಾ ನದಿ ತೀರದ ಸಮೀಪ ಸಭೆ ನಡೆಸುವ ಉದ್ದೇಶದಿಂದ ನಾಯ್ಡು ನಿರ್ಮಿಸಿದ್ದ `ಪ್ರಜಾ ವೇದಿಕೆ’ ಸರ್ಕಾರಿ ಕಟ್ಟಡವನ್ನು ಒಡೆದು ಹಾಕುವಂತೆ ಇಂದು ಅಧಿಕೃತ ಆದೇಶ ನೀಡಿದ್ದಾರೆ.
2017ರಲ್ಲಿ ನಾಯ್ಡು ಮನೆ ಸಮೀಪದಲ್ಲೇ 5 ಕೋಟಿ ರೂ. ವೆಚ್ಚದಲ್ಲಿ ಈ ವೇದಿಕೆ ನಿರ್ಮಿಸಿದ್ದರು. ಮುಖ್ಯಮಂತ್ರಿ ಆದ ನಂತರ ಜಗನ್ ಮೊದಲ ಬಾರಿಗೆ ಪ್ರಜಾ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದರು. ಈ ವೇಳೆ, ಇದೇ ಕೊನೇ ಸಭೆ. ಪಾರದರ್ಶಕತೆ ನಿಟ್ಟಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಈ ಕಟ್ಟಡವನ್ನು ಧ್ವಂಸಗೊಳಿಸಬೇಕು ಎಂದು ಹೇಳಿದ್ದರು.
Advertisement
Advertisement
ಕೆಲ ವಾರಗಳ ಹಿಂದೆಯಷ್ಟೇ ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಸರ್ಕಾರ ವಾಪಸ್ ಪಡೆಯಲಾಗಿತ್ತು. ಇತ್ತ ಜೂನ್ 4 ರಂದು ಪ್ರಜಾ ವೇದಿಕಾ ಬಳಿ ಇರುವ ಮನೆಯಲ್ಲೇ ಇರಲು ಅವಕಾಶ ಕೊಡುವಂತೆ ನಾಯ್ಡು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ ‘ಪ್ರಜಾ ವೇದಿಕಾ’ ಹಾಲ್ ಅನ್ನು ಪಕ್ಷದ ಕಾರ್ಯಗಳನ್ನು ನಡೆಸಲು ಬಳಕೆ ಮಾಡಲು ನೀಡಬೇಕೆಂದು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದರು.
Advertisement
ಇತ್ತ ಜಗನ್ ಸರ್ಕಾರ ಕೃಷ್ಣ ನದಿಯ ತಟದಲ್ಲಿ ನಿರ್ಮಾಣ ಮಾಡಿರುವ ಈ ಮನೆಯೂ ಕೂಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದೆ. ಉಳಿದಂತೆ ಮೇ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಜಗನ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಮನವಿ ಮಾಡಿದ್ದರು. 2014ರಿಂದಲೂ ಆಂಧ್ರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರ ಬಳಿ ವಿಶೇಷ ಸ್ಥಾನಮಾನಕ್ಕಾಗಿ ಒತ್ತಡ ಹಾಕುತ್ತಲೇ ಇದೆ. ಇದೇ ವಿಚಾರವಾಗಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಎನ್‍ಡಿಎ ಒಕ್ಕೂಟವನ್ನು ತೊರೆದು ಬಂದಿದ್ದರು.