ಅಮರಾವತಿ: ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರು ತಮ್ಮ ಚಿಕ್ಕಪ್ಪ ವೈ.ಎಸ್ ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ತೆಲುಗು ದೇಶಂ ಪಕ್ಷದ (TDP) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ (Nara Lokesh) ಗಂಭೀರ ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂ ಜಿಲ್ಲೆಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಗನ್ ತಮ್ಮ ಚಿಕ್ಕಪ್ಪನನ್ನ (ಬಾಬಾಯ್) ಹತ್ಯೆ ಮಾಡಿದ್ದಾರೆ. ಇನ್ನಷ್ಟು ಕುಟುಂಬಗಳನ್ನ ಕೊಲ್ಲಲು ಅವರು ಸಿದ್ಧರಿದ್ದಾರೆ? ಅಮರನಾಥ್ ಗೌಡ ಅವರಂತಹ ಹಿಂದುಳಿದ ವರ್ಗದ ನಾಯಕ ಮತ್ತು ಡಾ.ಸುಧಾಕರ್ ಅವರಂತಹ ದಲಿತರನ್ನು ಹತ್ಯೆ ಮಾಡಲು ಸಿದ್ಧರಿದ್ದಾರಾ? ಈ ರಾಜ್ಯವನ್ನು ನಾಶ ಮಾಡೋದಕ್ಕಾಗಿಯೇ ನಿಂತಿದ್ದೀರಾ ರೆಡ್ಡಿಯವರೇ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್ ಮಾಜಿ ಸಚಿವ
Advertisement
Advertisement
ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರ ತನ್ನ ತಂದೆಯಾಗಿರುವ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು (Chandrababu Naidu) ಅವರನ್ನ ಕಾನೂನು ಬಾಹಿರವಾಗಿ ಬಂಧಿಸಿ, 53 ದಿನಗಳ ಕಾಲ ಜೈಲಿನಲ್ಲಿರಿಸಿದೆ ಎಂದು ನಾರಾ ಲೋಕೇಶ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 200 ಸಂಘಟನೆಗಳು, 20,000 ರೈತರಿಂದ ನಾಳೆ `ದೆಹಲಿ ಚಲೋ’ – ದೆಹಲಿ ಗಡಿ ಬಂದ್!
Advertisement
ಅಷ್ಟೇ ಅಲ್ಲ ಕಳೆದ ನಾಲ್ಕು ವರ್ಷಗಳಲ್ಲಿ ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ವಿರುದ್ಧ ಕೊಲೆಗೆ ಯತ್ನ & ದೌರ್ಜನ್ಯ ಸೇರಿದಂತೆ 22 ಪ್ರಕರಣಗಳನ್ನ ದಾಖಲಿಸಿದ್ದಾರೆ. ವೈಎಸ್‌ಆರ್‌ಸಿಪಿ ಪಕ್ಷದ ಮುಖಂಡರು ಉದ್ದೇಶಪೂರ್ವಕವಾಗಿಯೇ ಟಿಡಿಪಿ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ರೆಡ್‌ಲಿಸ್ಟ್‌ನಲ್ಲಿ ಇಟ್ಟಿದ್ದಾರೆ ಎಂದರಲ್ಲದೇ, ಭಾರತದಲ್ಲಿ ಆಂಧ್ರಪ್ರದೇಶವನ್ನ ಗಾಂಜಾ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ದೊಡ್ಡ ಗೆಲುವು – ಕತಾರ್‌ನಲ್ಲಿ ಅರೆಸ್ಟ್ ಆಗಿದ್ದ ನೌಕಾ ಅಧಿಕಾರಿಗಳು ಬಿಡುಗಡೆ, ಸ್ವದೇಶಕ್ಕೆ ವಾಪಸ್