CinemaCrimeLatestMain PostNationalSouth cinema

ಆಂಧ್ರ ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಪವನ್ ಕಲ್ಯಾಣ್ ಅಭಿಮಾನಿ ಅರೆಸ್ಟ್

ಅಮರಾವತಿ: ಬಾಂಬ್ ಹಾಕಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ನಟ ಪವನ್ ಕಲ್ಯಾಣ್ ಅವರ ಅಭಿಮಾನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾಜಮಹೇಂದ್ರವರಂನ 27 ವರ್ಷದ ರಾಜಾಪಲೇಮ್ ಫಣಿ ಬಂಧಿತ ಆರೋಪಿಯಾಗಿದ್ದಾನೆ. ಈತ ಸೋಶಿಯಲ್ ಮೀಡಿಯಾ ಮೂಲಕವಾಗಿ ಕೊಲೆ ಬೆದರಿಕೆಯನ್ನು ಹಾಕಿದ್ದನು. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

ಜನವರಿ 16 ರಂದು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‍ಗಳನ್ನು ಮಾಡಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಟ್ವೀಟ್‍ಗಳು ವೈರಲ್ ಆಗಿದ್ದನ್ನು ಗಮನಿಸಿ ಅವುಗಳನ್ನು ಅಳಿಸಿ ಹಾಕಿದ್ದ. ಈ ಕುರಿತು ಜಗನ್ ಸೇವಾದಳದ ಉಪಾಧ್ಯಕ್ಷ ಮಲ್ಯಂ ಶ್ರೀಕಾಂತ್ ಎನ್ನುವರು ತಿರುಪತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಐಪಿ ವಿಳಾಸ ಆಧರಿಸಿ ಬೆದರಿಕೆ ಹಾಕಿದ್ದವನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

ರಾಜಾಪಲೇಮ್ ಫಣಿ ಪವನ್ ಕಲ್ಯಾಣ ಅವರ ಜನಸೇನಾ ಪಕ್ಷದ ಬೆಂಬಲಿಗನಾಗಿದ್ದ. ಈತನ ಮೇಲೆ ಐಪಿಸಿ ಕಲಂ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಸೈಬರ್ ಕ್ರೈಂ ಎಸ್‍ಪಿ ಜಿ.ಆರ್. ರಾಧಿಕಾ ಹೇಳಿದ್ದಾರೆ. ಇದನ್ನೂ ಓದಿ: ಜಾತಿ, ಧರ್ಮ, ದೇಶ ಗಡಿ ದಾಟಿದ ಪ್ರೇಮ ಕಥೆ

Leave a Reply

Your email address will not be published.

Back to top button