ಅಮರಾವತಿ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ ಅನ್ನು ರದ್ದುಪಡಿಸುವ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದಾರೆ. ದಿನಪೂರ್ತಿ ಚರ್ಚೆ ಬಳಿಕ 130-0 ಮತದ ಅಂತರದಲ್ಲಿ ನಿರ್ಣಯಕ್ಕೆ ಅನುಮೋದನೆ ಸಿಕ್ಕಿದೆ.
ಆಂಧ್ರಕ್ಕೆ ಮೂರು ರಾಜಧಾನಿ ಮತ್ತು ಆಂಧ್ರ ಪ್ರದೇಶ ಕ್ಯಾಪಿಟಲ್ ರೀಜಿನ್ ಡೆವಲಪ್‍ಮೆಂಟ್ ಅಥಾರಿಟಿ ರದ್ದಿಗೆ ಪರಿಷತ್‍ನಲ್ಲಿ ಭಾರೀ ಹಿನ್ನಡೆಯಾಗಿತ್ತು. ಇದರಿಂದ ರೊಚ್ಚಿಗೆದ್ದಿರೋ ಜಗನ್‍ಮೋಹನ್ ರೆಡ್ಡಿ ಈಗ ಪರಿಷತ್ತನ್ನೇ ತೆಗೆದು ಹಾಕ್ತಿದ್ದಾರೆ. ವಿಧಾನಸಭೆಯಲ್ಲಿ ವೈಎಸ್‍ಆರ್ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಇರೋ ಕಾರಣ ಸುಲಭವಾಗಿ ಅನುಮೋದನೆ ಸಿಕ್ಕಿದೆ. ಈಗ ಸಂಸತ್‍ಗೆ ಕಳಿಸಬೇಕಿದೆ.
ಮಸೂದೆಗಳಿಗೆ ಅಡ್ಡಿಪಡಿಸ್ತಾ ಹೋದರೆ ಪ್ರತಿವರ್ಷ 60 ಕೋಟಿಯಂತೆ 5 ವರ್ಷಕ್ಕೆ 300 ಕೋಟಿ ವ್ಯರ್ಥವಾಗುತ್ತೆ ಎಂಬುವುದು ಜಗನ್ ಪ್ರತಿಪಾದನೆಯಾಗಿದೆ. ಜಗನ್ ನಡೆಗೆ ಟಿಡಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸದ್ಯ ದೇಶದಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರ 6 ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ಇದೆ.