ಧಾರವಾಡ: ಬಿಜೆಪಿಯನ್ನ ಅಲುಗಾಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಬಿಜೆಪಿಯ ಕೆಲ ಶಾಸಕರು ನನ್ನ ಸಂರ್ಪಕದಲ್ಲಿದ್ದಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮ್ಮನೆ ಹುಳ ಬಿಡುವ ಕೆಲಸ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅದು ನಿಜವಾಗಿದ್ದರೆ, ಧೈರ್ಯವಿದ್ದರೆ ಹೆಸರು ಬಹಿರಂಗ ಪಡಿಸಿಲಿ. ಕದ್ದು ಮುಚ್ಚಿ ಮಾಡುವುದು ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಆತ್ಮ ಗೌರವ ಇದ್ದವರು ಯಾರೂ ಕಾಂಗ್ರೆಸ್‍ಗೆ ವಾಪಸ್ ಹೋಗಲ್ಲ: ಬಿ.ಸಿ.ಪಾಟೀಲ್
Advertisement
Advertisement
ಈ ರೀತಿ ಹೇಳಿ ಬಿಜೆಪಿ ಬಗ್ಗೆ ನಕಾರಾತ್ಮಕತೆಯನ್ನು ಸೃಷ್ಟಿಸುತ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಕ್ಕೆ ಹೊರಟಿರುವವರು ಮುರ್ಖರು. ಕಾಂಗ್ರೆಸ್‍ನ್ನು ದೇಶದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಬೇಕಿದೆ. ಬಿಜೆಪಿಯನ್ನ ಅಲುಗಾಡಿಸೋಕೆ ಯಾರಿದಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಅಭ್ಯರ್ಥಿ ಘೋಷಿಸಲಿ, ಯಾರು ಉಳಿಯುತ್ತಾರೆ, ಹೋಗುತ್ತಾರೆ ನೋಡೋಣ: ಸಿ.ಟಿ. ರವಿ
Advertisement
Advertisement
ಜಿಲ್ಲಾ ಉಸ್ತುವಾರಿ ನೇಮಕದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಬೇಕಿತ್ತು. ನನ್ನ ವೈಯಕ್ತಿಕ ಅಭಿಪ್ರಾಯ ಇದು. ನನ್ನ ಪ್ರಕಾರ ಇದು ಅನಾನೂಕೂಲಕರವಾಗುತ್ತೆ. ಆಡಳಿತ ಅಭಿವೃದ್ಧಿ ದೃಷ್ಟಿಯಿಂದ ಆಯಾ ಜಿಲ್ಲೆಯವರಿಗೆ ನೀಡಿದರೆ ಒಳ್ಳೆದಾಗುತ್ತಿತ್ತು. ನಾನು ಈಗಾಗಲೇ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೂ ತಂದಿದ್ದೇನೆ. ಆದರೆ ಪಕ್ಷದ ನೀತಿ ಪ್ರಯೋಗವಿದೆ. ನೋಡೋಣ ಇದು ಯಾವ ರೀತಿ ಪರಿಣಾಮ ಬೀರುತ್ತೆ ಎನ್ನೋದು ಗೊತ್ತಾಗುತ್ತೆ. ಅದನ್ನ ನೋಡಿಕೊಂಡು ಪಕ್ಷದ ವರಿಷ್ಟರ ಜೊತೆ ಮಾತನಾಡುತ್ತೇವೆ. ಆದರೆ ಬೇರೆ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಿದ್ದು ಸರಿಯಲ್ಲ ಎಂದರು.