ಹುಬ್ಬಳ್ಳಿ: ಕಾಂಗ್ರೆಸ್ (Congress) ನಾಯಕರಿಗೆ ಹಿಂದೂ ಶಬ್ದವೇ ಅಲರ್ಜಿ ಆಗಿದೆ. ಚುನಾವಣೆ ಸಮಯದಲ್ಲಿ ಈ ರೀತಿ ಹೇಳಿಕೆ ನೀಡಿ ಅವರ ಅಜ್ಞಾನವನ್ನು ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಚುನಾವಣೆಯ ಸಮಯದಲ್ಲಿ ಹಿಂದೂ ಶಬ್ದದ ಚರ್ಚೆ ಮಾಡುವ ಅವಶ್ಯಕತೆಯಿರಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ಮತಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಹಿಂದೂಗಳನ್ನು ಮತ್ತು ಹಿಂದೂ ಪರಂಪರೆಯನ್ನು ಬೈದು ಅಲ್ಪಸಂಖ್ಯಾತರ ಮತ ಪಡೆಯುವ ತಂತ್ರವಾಗಿದೆ ಎಂದು ಕಿಡಿಕಾರಿದರು.
Advertisement
Advertisement
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಜನಿವಾರ ತೋರಿಸಿ, ನಾನು ಹಿಂದೂ ಅಂತಾರೆ. ಆದರೆ ಅವರ ಪಕ್ಷದ ಮುಖಂಡರನ್ನು ಈ ರೀತಿಯ ಬೈಯಲು ಬಿಡುತ್ತಾರೆ. ಸತೀಶ್ ಜಾರಕಿಹೊಳಿ (Satish Jarkiholi) ಕಾಂಗ್ರೆಸ್ ಪಕ್ಷದ ಉನ್ನತ ಸ್ಥಾನದಲ್ಲಿದ್ದಾರೆ. ಅವರ ಹೇಳಿಕೆಯಿಂದ ಅಪಾರ ಹಿಂದೂಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಅವರ ಬಗ್ಗೆ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕು: ಕಟೀಲ್ ಕಿಡಿ
Advertisement
Advertisement
ಭೈರತಿ ಬಸವರಾಜ ಲಂಚದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ದೂರು ಲೋಕಾಯುಕ್ತಕ್ಕೆ ನೀಡಲಿ, ಬಳಿಕ ಲೋಕಾಯುಕ್ತ ತನಿಖೆಯಾಗಲಿ. ಅದು ಬಿಟ್ಟು ಹಿಟ್ ಆಂಡ್ ರನ್ ರೀತಿಯಲ್ಲಿ ಆರೋಪ ಬೇಡ ಎಂದರು. ಇದನ್ನೂ ಓದಿ: ಒಬ್ಬ ಹಿಂದೂವಾಗಿ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನಾನೂ ಒಪ್ಪಲ್ಲ: ಡಿಕೆಶಿ