ಗದಗ: ಅಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂರೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ಪ್ರಕರಣವನ್ನು ಗಮನಿಸಿದರೆ ಈ ಹಿಂದೆ ರಾಜ್ಯದ ಸರ್ಕಾರದ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿ ಮೈತ್ರಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಜಗದೀಶ್ ಶೆಟ್ಟರ್ ಅವರು, 600-700 ಕೋಟಿ ರೂ. ಲೂಟಿ ಮಾಡಿದವರ ಬಗ್ಗೆ ಗಂಭೀರತೆ ಇಲ್ಲ. ಆದರೆ ಎಲ್ಲೋ ಕಮಿಷನ್ ಡೀಲಿಂಗ್ ಆಗಿದೆ ಅನ್ನುವ ಕಾರಣಕ್ಕೆ ಜನಾರ್ದನ ರೆಡ್ಡಿ ಬಂಧನ ಆಗಿದೆ. ಬಹುಶಃ ಎಲ್ಲೋ ರಾಜಕೀಯ ಪ್ರಭಾವ ಬೀರಿದ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿ ಪರೋಕ್ಷವಾಗಿ ಜನಾರ್ದನ ರೆಡ್ಡಿ ಪರವಾಗಿ ಬ್ಯಾಟಿಂಗ್ ಮಾಡಿದರು.
Advertisement
Advertisement
ಇದೇ ವೇಳೆ ಕಾನೂನು ರೀತಿ ತನಿಖೆ ನಡೆಯಲಿ. ರಾಜಕೀಯ ಹಿನ್ನೆಲೆಯಲ್ಲಿ ಇಟ್ಟುಕೊಂಡು ಯಾವುದೇ ಸರ್ಕಾರ ಈ ರೀತಿ ಮಾಡಬಾರದು. ಡಿಕೆಶಿ ವಿರುದ್ಧ ಇಡಿ ತನಿಖೆ ನಡೆದಾಗ ಇದೇ ಕಾಂಗ್ರೆಸ್ ನಾಯಕರು ರಾಜಕೀಯ ಕಾರಣ ಅಂದರು. ಅದೇ ರೀತಿ ರೆಡ್ಡಿ ವಿರುದ್ಧ ರಾಜಕೀಯ ಕಾರಣಕ್ಕೆ ನಡೆದಿದೇಯಾ ಎನ್ನುವ ಮಾತು ಇದೆ. ರಾಜಕೀಯ ಪಕ್ಷ ಎಂಬುವುದನ್ನು ನೋಡದೆ ಕಾನೂನು ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣವನ್ನು ನೋಡಬೇಕು ಎಂದರು.
Advertisement
ಇದೇ ವೇಳೆ ಕೆಎಸ್ ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್ ಅವರು, ಹಿಂದುಳಿದ ನಾಯಕ ಇನ್ನೊಬ್ಬ ಹಿಂದುಳಿದ ನಾಯಕನ ಬಗ್ಗೆ ಈ ರೀತಿ ಕೀಳು ಮಾತು ಆಡುವುದು ಸರಿಯಲ್ಲ. ಮೆದುಳಿಲ್ಲ, ದಡ್ಡ ಇದ್ದಾನೆ ಎಂಬ ಪದ ಮಾಜಿ ಸಿಎಂಗೆ ಶೋಭೆ ತರಲ್ಲ. ಸಿದ್ದರಾಮಯ್ಯ ಇಡೀ ಜಗತ್ತಿನಲ್ಲಿ ನೀವೋಬ್ಬರೇ ಜಾಣರು ಎಂದು ತಿಳಿದುಕೊಂಡಿದ್ದೀರಾ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೀಳು ಅಭಿರುಚಿ ತೋರಿಸುತ್ತದೆ. ಆದರೆ ಇಂತಹ ಹೇಳಿಕೆಗಳಿಂದ ಈಶ್ವರಪ್ಪ ಅವರ ಗೌರವಕ್ಕೆ ಧಕ್ಕೆ ಆಗುವುದಿಲ್ಲ ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews